ಬೆಂಗಳೂರು : ಎಫ್‌ಸ್ಟೀನ್ ಫೈಲ್ಸ್‌ನಿಂದಾಗಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಕಡಿಮೆ ಆಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಉಪಚುನಾವಣೆ ಘೋಷಣೆ ವಿಚಾರವಾಗಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಪಂಚ ರಾಜ್ಯದಲ್ಲಿ ಚುನಾವಣೆಯಲ್ಲಿ ನಾವು ತಮಿಳುನಾಡು ಮತ್ತು ಅಸ್ಸಾಂನಲ್ಲಿ ಗೆಲ್ಲುವ ಸಾಧ್ಯತೆ ಇದೆ ಮೋದಿ ವಿರೋಧಿ ಅಲೆ ಈ ಸರಿ ನಮಗೆ ಅನುಕೂಲ ಆಗುತ್ತದೆ. ಅವರು ದೇಶದ ಹಿತಾಸಕ್ತಿಯನ್ನ ಬಲಿ ಕೊಟ್ಟಿದ್ದಾರೆ. ಇದರಿಂದ ಇಂಡಿಯಾ ಕೂಟಕ್ಕೂ ಅನುಕೂಲ ಆಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು, ಇದೇ ವೇಳೆ ಸಿಎಂ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿ, ಸಿನೀಯರ್ ಇದ್ದವರನ್ನ ಐದಾರು ತಿಂಗಳಿಗೊಮ್ಮೆ ಕರಿತಾ ಇರ್ತಾರೆ. ನನಗೂ ಸಿಎಂ ಆಹ್ವಾನ ಕೊಟ್ಟಿದ್ದಾರೆ, ನಾನು ಹೋಗುತ್ತೇನೆ. ಒಳಮೀಸಲಾತಿ, ಬಜೆಟ್ ಅಧಿವೇಶನದ ಕಾರ್ಯತಂತ್ರ, ಇದೆಲ್ಲದರ ಕುರಿತು ಮಾತನಾಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಮನ್ ಅವಾರ್ಡ್ಸ್ 2026 : ಬಿಸಿಸಿಐನ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಶುಭಮನ್ ಗಿಲ್ ಹಾಗೂ ಸ್ಮೃತಿ ಮಂಧಾನ



















