ಬೆಂಗಳೂರು: ಗ್ಯಾಸ್ ಕೊರತೆಯಿಂದ ನಗರದಲ್ಲಿ ಬಂದ್ ಆಗಿದ್ದ ಇಂದಿರಾ ಕ್ಯಾಂಟೀನ್‌ಗಳು ಇನ್ನೆರಡು ದಿನಗಳಲ್ಲಿ ಪುನಃ ಆರಂಭವಾಗುವ ಸಾಧ್ಯತೆ ಇದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ (IOC) ಸಂಸ್ಥೆ ಇಂದಿರಾ ಕ್ಯಾಂಟೀನ್‌ಗಳಿಗೆ ಗ್ಯಾಸ್ ಪೂರೈಕೆ ಮಾಡಲು ಸಮ್ಮತಿ ನೀಡಿದೆ.
ಇಂದಿರಾ ಕಿಚನ್‌ನಲ್ಲಿ ಪ್ರತಿದಿನ ಸುಮಾರು 80 ಗ್ಯಾಸ್ ಸಿಲಿಂಡರ್‌ಗಳ ಅಗತ್ಯವಿದ್ದು, ಈ ಎಲ್ಲ ಸಿಲಿಂಡರ್‌ಗಳನ್ನು ಪೂರೈಸಲು ಐಒಸಿ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಐಒಸಿ ಗ್ಯಾಸ್ ಪೂರೈಕೆಗೆ ಸಮ್ಮತಿ ನೀಡಿದ್ದು, ಇದರ ಫಲವಾಗಿ ಇನ್ನೆರಡು ದಿನಗಳಲ್ಲಿ ಬಂದ್ ಆಗಿರುವ ಇಂದಿರಾ ಕ್ಯಾಂಟೀನ್‌ಗಳು ಯಥಾಸ್ಥಿತಿಗೆ ಮರಳುವ ನಿರೀಕ್ಷೆಯಿದೆ.
ಗ್ಯಾಸ್ ಕೊರತೆಯ ಹಿನ್ನೆಲೆ ಇಂದು ನಗರದಲ್ಲಿ 60ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಕಾರ್ಯಾಚರಣೆ ನಿಲ್ಲಿಸಿದ್ದವು. ಇದೀಗ ಪ್ರಾಧಿಕಾರ ಎಚ್ಚೆತ್ತು ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಕ್ಯಾಂಟೀನ್‌ಗಳಲ್ಲಿ ಸೇವೆ ಪುನರಾರಂಭವಾಗಲಿದೆ.
ಇದನ್ನೂ ಓದಿ : ನಾರ್ಕೊಟೆಕ್ ಸಿರಪ್ ಮಾರಾಟ ಮಾಡ್ತಿದ್ದ ಇಬ್ಬರ ಬಂಧನ



















