ಚಿಕ್ಕಮಗಳೂರು: ಗಂಡು ಮಕ್ಕಳು ಇಲ್ಲದ ಹಿನ್ನೆಲೆಯಲ್ಲಿ ತಂದೆಯ ಅಂತ್ಯಸಂಸ್ಕಾರವನ್ನು ಇಬ್ಬರು ಪುತ್ರಿಯರು ನೆರವೇರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದಿದೆ.
ಬೀರೂರು ಪಟ್ಟಣದ ನಿವಾಸಿ ವಿಶ್ವನಾಥ್ ಅವರು ನಿನ್ನೆ ನಿಧನರಾದರು. ಅವರಿಗೆ ಗಂಡು ಮಕ್ಕಳು ಇರದ ಹಿನ್ನೆಲೆಯಲ್ಲಿ ಅವರ ಪುತ್ರಿಯರಾದ ಐಶ್ವರ್ಯ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು ತಂದೆಯ ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನೆರವೇರಿಸಿದರು.
ಭಾವಸಾರ ಕ್ಷತ್ರಿಯ ಸಮಾಜದ ಆಚರಣೆಗಳಂತೆ ವಿಧಿವಿಧಾನಗಳನ್ನು ಅನುಸರಿಸಿ ಇಬ್ಬರು ಪುತ್ರಿಯರೂ ತಂದೆಯ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು.
ಪುತ್ರಿ ಐಶ್ವರ್ಯ ತಂದೆಯ ಅಂತ್ಯಸಂಸ್ಕಾರ ಕಾರ್ಯವನ್ನು ಧೈರ್ಯದಿಂದ ನೆರವೇರಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದಿದ್ದು, ಸಮಾಜದಲ್ಲಿ ಹೆಣ್ಣು ಮಕ್ಕಳ ಪಾತ್ರದ ಕುರಿತು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಲಿವಿಂಗ್ ರಿಲೇಶನ್ಶಿಪ್‌ನಲ್ಲಿ ಜಗಳ : ನೇಣು ಹಾಕಿ ಕೊಲೆಗೈದ ದುಷ್ಟ



















