ದಾವಣಗೆರೆ:ಸರ್ಕಾರದ ನಡೆ ಖಂಡಿಸಿ ಹಾಗೂ 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಒಳಮೀಸಲಾತಿ ಅಳವಡಿಸಲು ಒತ್ತಾಯಿಸಿ ಜಿಲ್ಲೆಯ ವಿವಿಧ ಮಾದಿಗರ ಪರ ಸಂಘಟನೆಗಳ ಒಕ್ಕೂಟ ಇಂದು ದಾವಣಗೆರೆ ಬಂದ್‌ಗೆ ಕರೆ ನೀಡಿದೆ. ಬೆಳ್ಳಂ ಬೆಳಗ್ಗೆ ಬೀದಿಗಿಳಿದ ದಲಿತ ಸಂಘಟನೆಗಳು, ಸ್ವಯಂ ಪ್ರೇರಿತ ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ.

ಹೂವಿನ ಮಾರುಕಟ್ಟೆ, ಬಸ್ ನಿಲ್ದಾಣ ಬಳಿ ಮನವಿ ಮಾಡುತ್ತಾ ಅಂಗಡಿ ಮುಚ್ಚಿ ಬಂದ್ ಬೆಂಬಲಿಸಿ ಎಂದು ಕರೆ ಕೊಟ್ಟಿದ್ದಾರೆ. ಇದೇ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಕೆಲ ಗಂಟೆಗಳಲ್ಲಿ ದಲಿತ ಸಂಘಟನೆಗಳು ಹೋರಾಟ ಜೋರಾಗಿದೆ. ದಲಿತ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಮೊಳಗಿದ್ದು, ಪೊಲೀಸರ ಕಣ್ತಪ್ಪಿಸಿ ಟೈಯರ್ಗೆ ಬೆಂಕಿ ಇಟ್ಟು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ನಗರದ ಹಳೆ ಬಸ್ ನಿಲ್ದಾಣ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಶೇಖರ್ HT ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ ಮಾತಾಡಿ ದಾವಣಗೆರೆ ಎಸ್ಪಿ ಶೇಖರ್ HT ಬಂದ್ ಹಿನ್ನೆಲೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಯಾವುದೇ ರೀತಿಯ ಒತ್ತಾಯಕ ಬಂದ್ ಮಾಡುವಂತಿಲ್ಲ. ಒತ್ತಾಯ ಪೂರ್ವಕವಾಗಿ ಬಂದ್ ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಇರೋ ಕಾರಣ ಯಾವುದೇ ರೀತಿ ತೊಂದರೆ ಕೊಡುವಂತಿಲ್ಲ ಎಂದು ಎಸ್ಪಿ ಶೇಖರ್ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ನಗರ ಪ್ರವೇಶಿಸುವ ರಸ್ತೆ ಬಂದ್ ಮಾಡಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಬಂದ್ ಮಾಡಿದ ಹಿನ್ನೆಲೆ ಸಾರ್ವಜನಿಕರ ಪರದಾಡುವಂತಾಗಿದೆ. ವಾಹನಗಳನ್ನ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಧರಣಿ ನಡೆಸುತ್ತಿರೋ ಪ್ರತಿಭಟನಾಕಾರರು ಹಾಗೂ ಬೈಕ್ ಸವಾರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಹೋರಾಟಗಾರರ ಮನವೊಲಿಸಿ ಬೈಕ್ ಸವಾರನನ್ನ ಪೊಲೀಸರು ಕಳಿಸಿದ್ದಾರೆ. ಹೋರಾಟಗಾರರ ಸಮಾಧಾನಪಡಿಸಲು ಡಿವೈಎಸ್‌ಪಿ ಶರಣಬಸವೇಶ್ವರ ಹರಸಾಹಸ ಪಡುತ್ತಿದ್ದಾರೆ. ಇತ್ತ ಪರೀಕ್ಷೆ ಇರುವ ಹಿನ್ನೆಲೆ ವಿದ್ಯಾರ್ಥಿಗಳು ಬಸ್ ಇಳಿದು ನಡೆದುಕೊಂಡೇ ಹೋಗುವಂತಾಗಿದೆ.
ಇದನ್ನೂ ಓದಿ: ಬೈಕ್-ಕಾರು ನಡುವೆ ಭೀಕರ ಅಘಾತ | ಮೂವರು ಬೈಕ್ ಸವಾರರು ದುರ್ಮಣ



















