ಬೆಂಗಳೂರು: ಬಟ್ಟೆ ಬಿಚ್ಚಿ ಮಹಿಳೆ, ಯುವತಿಯ ಮುಂದೆ ಯುವಕರು ಅಸಭ್ಯವಾಗಿ ವರ್ತಿಸಿ, ಆವಾಜ್ ಹಾಕಿರುವ ಘಟನೆ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯ ಕೃಷ್ಟ ಕುಟೀರ ಹೋಟೆಲ್ ಪಕ್ಕದಲ್ಲಿರುವ ದಿ ಸೋಡಾ ಫ್ಯಾಕ್ಟರಿ ರೆಸ್ಟೋರೆಂಟ್ ನಲ್ಲಿ ನಡೆದಿದೆ.
ಬಟ್ಟೆ ಬಿಚ್ಚಿಕೊಂಡು ರೆಸ್ಟೋರೆಂಟ್ ಒಳಗೆ ಯುವಕರು ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಫ್ಯಾಮಿಲಿ ಸಮೇತ ರೆಸ್ಟೋರೆಂಟ್‌ಗೆ ಬಂದಿದ್ದ ಮಹಿಳೆಯೊಬ್ಬರು, ಮಹಿಳೆಯರು, ಯುವತಿಯರು ಇದ್ದಾರೆ ಬಟ್ಟೆ ಹಾಕಿಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೇ ಜೊತೆಯಲ್ಲಿ ಇದ್ದ ಮತ್ತೊಬ್ಬ ಯುವಕ ಎಲ್ಲಾ ಬಟ್ಟೆ ಬಿಚ್ತೀನಿ ಏನ್ ಮಾಡ್ಕೋತ್ತಿಯಾ, ನನ್ನ ಬಟ್ಟೆ ನನ್ನಿಷ್ಟ ನೀನ್ ಯಾರ್ ಕೇಳೊದಕ್ಕೆ ಶೂಟ್ ಮಾಡ್ತೇನೆ ಹುಷಾರ್ ಎಂದು ಆವಾಜ್ ಹಾಕಿದ್ದಾನೆ.
ಇದರಿಂದ ಗಾಬಾರಿಯಾದ ಕುಟುಂಬ, ಸ್ನೇಹಿತರಿಗೆ ಕಾಲ್ ಮಾಡಿದ್ದಾರೆ. ಸ್ನೇಹಿತರು ಸ್ಥಳಕ್ಕೆ ಬರೋ ಒಳಗೆ ಯುವಕರು ಎಸ್ಕೇಪ್ ಆಗಿದ್ದಾರೆ. ಗಾಂಜಾ ಮತ್ತಿನಲ್ಲಿ ಯುವಕರು ಅಸಭ್ಯ ವರ್ತನೆ ತೋರಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಚಿತ್ರದುರ್ಗ | ಪ್ರಿಯತಮೆಯ ಮೋಸದ ಬಲೆಗೆ ಸಿಕ್ಕಿ ಯುವಕ ಸೂಸೈಡ್



















