ಇರಾನ್ | ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಮುಗಿ ಬಿದ್ದಿವೆ. ಇರಾನ್ ನ ಶಾಲೆಯೊಂದರ ಮೇಲೆ ದಾಳಿ ನಡೆದಿದ್ದು, ವಿದ್ಯಾರ್ಥಿಗಳು ಸೇರಿದಂತೆ 40ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ದಕ್ಷಿಣ ಇರಾನ್‌ನ ಶಾಲೆ ಸೇರಿದಂತೆ ಹಲವೆಡೆ ಇಂದು ದಾಳಿಗಳು ನಡೆದಿವೆ.
ಯುದ್ಧ ಆರಂಭವಾಗುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನ ಜನರಿಗೆ ‘1979 ರಿಂದ ರಾಷ್ಟ್ರ ಆಳುತ್ತಿರುವ ಇಸ್ಲಾಮಿಕ್ ನಾಯಕತ್ವದ ವಿರುದ್ಧ ಎದ್ದು ನಿಲ್ಲುವಂತೆ ಕರೆ ಕೊಟ್ಟಿದ್ದಾರೆ. ಈಗಾಗಲೇ ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಸುತ್ತಮುತ್ತಲಿನ ಪ್ರದೇಶ ನಾಶಗೊಂಡಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಂಟಿ ಕಾರ್ಯಾಚರಣೆಯು ಧೈರ್ಯಶಾಲಿ ಇರಾನಿನ ಜನರು ತಮ್ಮ ಭವಿಷ್ಯವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಸುತ್ತದೆ ಎಂದಿದ್ದಾರೆ. ಈಗಾಗಲೇ ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡದಲ್ಲಿ ಮಿಂದೇಳುತ್ತಿದೆ.
ಬಹ್ರೇನ್, ಕುವೈತ್ ಮತ್ತು ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ದಾಳಿಗಳು ವರದಿಯಾಗಿವೆ. ಪ್ರತಿಕಾರ ತೀರಿಸಿಕೊಳ್ಳುವ ಮಾತುಗಳನ್ನು ಇರಾನ್ ಹೇಳಿದೆ. ಶಸ್ತ್ರತ್ಯಾಗ ಮಾಡದಿದ್ದರೆ ತಕ್ಕ ಶಾಸ್ತಿ ಅಂತಾ ಅಮೆರಿಕ ಹೇಳಿದೆ.
ಇದನ್ನೂ ಓದಿ : ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ | ಟ್ರೈನ್ ಹತ್ತುವ ಮುನ್ನ ಹೊಸ ಬದಲಾವಣೆ ತಿಳಿದುಕೊಳ್ಳಿ



















