ಬೆಂಗಳೂರು | ಇಡೀ ದೇಶವೇ ತಲೆ ತಗ್ಗಿಸುವಂತಹ ಘಟನೆ ನಡೆದಿರುವ ಅಮೃತಹಳ್ಳಿ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಮಧ್ಯೆ ಬೆಚ್ಚಿ ಬೀಳಿಸುವ ಹಲವಾರು ಸತ್ಯಸಂಗತಿಗಳು ಹೊರ ಬರುತ್ತಿವೆ.
ಇದು ಕೇವಲ ಆಕಸ್ಮಿಕ ಪೈಶಾಚಿಕ ಕೃತ್ಯವಲ್ಲ. ಬದಲಾಗಿ ವ್ಯವಸ್ಥಿತವಾಗಿ ನಶಾಸುರರು, ಕೊಲೆಗಡುಕರು, ಹೆಣ್ಣು ಪೀಡಕರು ನಡೆಸುತ್ತಿದ್ದ ಪೈಶಾಚಿಕ ಕೃತ್ಯದ ವ್ಯವಸ್ಥಿತ ಸಂಚು ಒಂದೊಂದಾಗಿ ಹೊರ ಬರುತ್ತಿವೆ. ಇದು ‘ಸೆಕ್ಸ್ ರ‍್ಯಾಕೆಟ್’ ಆಗಿರಬಹುದು ಎನ್ನಲಾಗುತ್ತಿದೆ. ಇನ್‌ಸ್ಟಾಗ್ರಾಮ್ ಮತ್ತು ಕಾಲೇಜುಗಳಲ್ಲಿ ಪರಿಚಯವಾಗುವ ಯುವತಿಯರೇ ಈ ಕಾಮುಕರ ಟಾರ್ಗೆಟ್ ಎಂಬುವುದು ತನಿಖೆಯಿಂದ ತಿಳಿದು ಬರುತ್ತಿದೆ.
ಕಾಮುಕರ ಬಲೆಗೆ ಹೆಚ್ಚಿಗ ಬೇರೆ ಬೇರೆ ರಾಜ್ಯಗಳ ಯುವತಿಯರೇ ಬಿದ್ದಿದ್ದಾರೆ. ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಇಂತಹ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ. ಮರ್ಯಾದೆಗೆ ಅಂಜಿ ಹಲವರು ಯಾರಿಗೂ ಹೇಳದೆ ಸುಮ್ಮನಾಗಿದ್ದಾರೆ ಎನ್ನಲಾಗಿದೆ.
ಮೊದಲು ಪರಿಚಯ ಮಾಡಿಕೊಂಡು, ಫೋಟೋ ಶೂಟ್ ಎಂದು ನಂಬಿಸಿ ಪಾರ್ಟಿ ಬಗ್ಗೆ ನಂಬಿಸಿ ಬೆಂಗಳೂರಿನ ಸುತ್ತಮುತ್ತಲಿನ ಹಲವು ವಿಲ್ಲಾಗಳಿಗೆ ಕರೆದುಕೊಂಡು ಬಂದು ತಮ್ಮ ಕೃತ್ಯ ಎಸಗುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಪೂರ್ಣ ತನಿಖೆಯ ನಂತರವೇ ಅಕ್ರಮ ಬಯಲಿಗೆ ಬರಲಿವೆ.
ಇದನ್ನೂ ಓದಿ : ಬೀದಿ ನಾಯಿ ದಾಳಿಗೆ ಬಾಲಕ ಸಾವು



















