ಕ್ಯಾಲಿಫೋರ್ನಿಯಾ : ಅಮೆರಿಕಾದಲ್ಲಿ 4 ದಶಕಗಳಲ್ಲೇ ಎಂದು ಕಂಡರಿಯದ ಭಾರೀ ಹಿಮಪಾತ ದುರಂತವೊಂದು ಸಂಭವಿಸಿದ್ದು, 8 ಜನ ಬಲಿಯಾಗಿದ್ದಾರೆ. ಭಾರೀ ಹಿಮಪಾತವಾಗಿದ್ದರಿಂದಾಗಿ ಸಾಕಷ್ಟು ತೊಂದರೆಗಳು ಕೂಡ ಎದುರಾಗಿವೆ.
ಸಿಯೆರಾ ನೆವಾಡಾದಲ್ಲಿ ಲೇಕ್ ಟಹೋ ಬಳಿಯ ಪರ್ವತಾರೋಹಿಗಳ ಮೇಲೆ ಹಿಮಪಾತ ಸಂಭವಿಸಿದೆ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿನ ಕ್ಯಾಸಲ್ ಪೀಕ್ ಪ್ರದೇಶದ ಲೇಕ್ ಟಹೋ ಬಳಿ ಮಂಗಳವಾರ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 8 ಜನ ಬಲಿಯಾಗಿದ್ದಾರೆ ಕೂಡ. ಅಲ್ಲದೇ, ಇದೇ ದುರಂತದಲ್ಲಿ 9 ಜನ ನಾಪತ್ತೆಯಾಗಿದ್ದರು. ಕಾರ್ಯಾಚರಣೆ ನಂತರ 8 ಜನ ಪತ್ತೆಯಾಗಿದ್ದಾರೆ.
ಈ ಹಿಂದೆ 1981ರಲ್ಲಿ ಅಮೆರಿಕಾದಲ್ಲಿ ಭಾರೀ ಹಿಮಪಾತ ದುರಂತ ಸಂಭವಿಸಿತ್ತು. ಆ ಘಟನೆ ನಂತರ ಇದೇ ಮೊದಲ ಬಾರಿಗೆ ಇಂತಹ ಭಯಾನಕ ದುರಂತ ಸಂಭವಿಸಿದೆ.
ಈ ಪ್ರದೇಶದಲ್ಲಿ ಹಿಮಪಾತ ಹೆಚ್ಚಾಗಿದ್ದು, ಈ ನಡುವೆ ಸ್ಕೀ ಮಾಡಲು ಹೋಗಿದ್ದಾರೆ. ಈ ದುರಂತಕ್ಕೂ ಮುನ್ನ ಆ ದಿನ ಬೆಳ್ಳಿಗೆಯೇ ಹಿಮಪಾತ ಹೆಚ್ಚಾಗಲಿದೆ ಎಂದು ಎಚ್ಚರಿಸಲಾಗಿತ್ತು. 15 ಮಂದಿಯಲ್ಲಿ 6 ಜನರನ್ನು ರಕ್ಷಿಸಲಾಗಿದ್ದು, 3 ಗೈಡ್ ಗಳು ಹಾಗೂ 5 ಸ್ಕೀಯರ್ಸ್ ಸಾವನ್ನಪ್ಪಿ, ಓರ್ವ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಕಾಣೆಯಾಗಿರುವ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಮಾರಕ ಹಿಮಪಾತಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ : ಕೆರಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನ.. ಪೊಲೀಸರಿಂದ ಉಳಿಯಿತು ಪ್ರಾಣ!



















