ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಮರತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ 22 ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು ದೇವಾನಂದ ಶೆಟ್ಟಿ (ಹಳ್ನಾಡು) ಸೇರಿದಂತೆ ಉತ್ತರ ಪ್ರದೇಶದ ಬಾರಾಬಂಕಿ ಮತ್ತು ಗೊಂಡ ಜಿಲ್ಲೆಗಳ ಮೂಲದ ಒಟ್ಟು 22 ಮಂದಿ ಎಂದು ಗುರುತಿಸಲಾಗಿದೆ.
ದಾಳಿಯ ವೇಳೆ ಸುಮಾರು 315 ಯುನಿಟ್ ಮರಳು (ಅಂದಾಜು ಮೌಲ್ಯ ರೂ. 8,50,000/-), ತೆಗೆಯಲು ಬಳಸಿದ 3 ಪೈಬರ್ ಬೋಟ್‌ಗಳು (ಅಂದಾಜು ಮೌಲ್ಯ ರೂ. 3,00,000/-), ಮರದ ಹಿಡಿಯಿರುವ ಕಬ್ಬಿಣದ ಹಾರೆ- 6 (ರೂ. 800/-) ಹಾಗೂ ಪೈಬರ್ ಬುಟ್ಟಿ -8 (ರೂ. 600/-) ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಇದನ್ನೂ ಓದಿ: ಸಿದ್ದಗಂಗಾ ಮಠದ ಮ್ಯಾನೇಜರ್ ನಿಧನ



















