ಬೆಂಗಳೂರು : ಪ್ರತಿ ಪೋಷಕರು ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಬಯಸುತ್ತಾರೆ. ಮಕ್ಕಳ ಶಿಕ್ಷಣ, ಮದುವೆಗಾಗಿ ಹೂಡಿಕೆ ಮಾಡುತ್ತಾರೆ. ಹೀಗೆ ಮಕ್ಕಳ ಭವಿಷ್ಯವನ್ನು ಸುಭದ್ರವಾಗಿಸುವ ದಿಸೆಯಲ್ಲಿ ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಹೊಸ ಯೋಜನೆ ಜಾರಿಗೆ ತಂದಿದೆ. ಹೌದು, ಎಲ್ಐಸಿ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್ (LIC Children Money Back Plan) ಯೋಜನೆಯಲ್ಲಿ ಪೋಷಕರು ಮಕ್ಕಳ ಹೆಸರಲ್ಲಿ ಪ್ರತಿ ದಿನ 150 ರೂ. ಅಥವಾ ಮಾಸಿಕ 4,500 ರೂ. ಹೂಡಿಕೆ ಮಾಡಿದರೆ, 19 ಲಕ್ಷ ರೂಪಾಯಿ ಗಳಿಸಬಹುದಾಗಿದೆ.
ಹೊಸ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 4,500 ರೂಪಾಯಿಯಂತೆ 25 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನಿಮಗೆ ಮೆಚ್ಯೂರಿಟಿ ಬಳಿಕ 19 ಲಕ್ಷ ರೂಪಾಯಿ ಲಭಿಸುತ್ತದೆ. ನೀವು 25 ವರ್ಷಗಳಲ್ಲಿ 14 ಲಕ್ಷ ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಮೆಚ್ಯೂರಿಟಿ ಬಳಿಕ ಬೋನಸ್, ರಿಟರ್ನ್ಸ್ ಸೇರಿ ಒಟ್ಟು 19 ಲಕ್ಷ ರೂಪಾಯಿ ಗಳಿಸುತ್ತೀರಿ.
ಎಲ್ಐಸಿ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್ ಯೋಜನೆ ಅಡಿಯಲ್ಲಿ ಪ್ರೀಮಿಯಂ ಪಾವತಿ ಸುಲಭವಾಗಿದೆ. ನೀವು ಪ್ರೀಮಿಯಂಅನ್ನು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು. ಇದು ನಿಮ್ಮ ಬಜೆಟ್ ಮತ್ತು ಆದಾಯದ ಪ್ರಕಾರ ಹೂಡಿಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.
ಮಗು ಹುಟ್ಟಿದ ತಕ್ಷಣದಿಂದ ಹಿಡಿದು, ಆ ಮಗುವಿಗೆ 12 ವರ್ಷ ತುಂಬುವ ಮೊದಲು ನೀವು ಯಾವಾಗ ಬೇಕಾದರೂ ಹೂಡಿಕೆ ಆರಂಭಿಸಬಹುದು. ನಿಮ್ಮ ಮಗುವಿಗೆ 18, 20, 22, 25 ವರ್ಷ ವಯಸ್ಸಾದಾಗ ಹೂಡಿಕೆ ಮಾಡಿದ ಮೊತ್ತದಲ್ಲಿ ಶೇ.20ರಷ್ಟು ಹಣವನ್ನು ಯಾವುದೇ ಕಾರಣಕ್ಕಾಗಿ ವಾಪಸ್ ಪಡೆಯಬಹುದಾಗಿದೆ. ಹಾಗೊಂದು ವೇಳೆ ನೀವು ಹಣ ವಾಪಸ್ ಪಡೆಯದೆ, 25 ವರ್ಷ ಹೂಡಿಕೆ ಮಾಡಿದರೆ, ಮಗುವಿಗೆ 25 ವರ್ಷ ತುಂಬುತ್ತಲೇ ಶೇ.40ರಷ್ಟು ಬೋನಸ್ ನೀಡಲಾಗುತ್ತದೆ.
ಗಮನಿಸಿ
ಎಲ್ಐಸಿ ಯೋಜನೆಯ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಲಾಗಿದೆ. ಇದು ಹೂಡಿಕೆಗೆ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರನ್ನು ಸಂಪರ್ಕಿಸುವುದನ್ನು ಮರೆಯದಿರಿ.
ಇದನ್ನೂ ಓದಿ : ತುಮಕೂರು | ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದ ರೈತ!



















