ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆಯ ಬೆನ್ನಲ್ಲೇ, ಬೆಂಗಳೂರು ಮೆಟ್ರೋ ರೈಲು ನಿಗಮ ಪಾಸ್ ಬಳಕೆದಾರರಿಗೂ ಶಾಕ್ ನೀಡಿದೆ. ಮೂರು ದಿನದ ಮತ್ತು ಐದು ದಿನದ ಪಾಸ್ ದರಗಳನ್ನು ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ.
ದಿನದ ಪಾಸ್ ದರದಲ್ಲಿ 13 ರೂ ಹೆಚ್ಚಳ ಮಾಡಲಾಗಿದ್ದು, ಮೂರು ದಿನದ ಪಾಸ್ ದರದಲ್ಲಿ 28 ರೂ ಮತ್ತು ಐದು ದಿನದ ಪಾಸ್ ದರದಲ್ಲಿ 43 ರೂ ಹೆಚ್ಚಳ ಮಾಡಲಾಗಿದೆ.
ಸ್ಮಾರ್ಟ್ ಕಾರ್ಡ್ ಮೂಲಕ ಪಡೆಯುವ ದಿನದ ಪಾಸ್ ದರ 300 ರೂಗಳಿಂದ 313 ರೂಗಳಿಗೆ ಏರಿಕೆಯಾಗಿದೆ. ಕ್ಯೂಆರ್ ಕೋಡ್ ಮೂಲಕ ಪಡೆಯುವ ದಿನದ ಪಾಸ್ ದರ 250 ರೂಗಳಿಂದ 263 ರೂಗಳಿಗೆ ಹೆಚ್ಚಿಸಲಾಗಿದೆ.
ಮೂರು ದಿನದ ಪಾಸ್ ಸ್ಮಾರ್ಟ್ ಕಾರ್ಡ್ ಮೂಲಕ 600 ರೂ ಇದ್ದಿದ್ದು, ಇದೀಗ 628 ರೂ ಆಗಿದೆ. ಕ್ಯೂಆರ್ ಕೋಡ್ ಮೂಲಕ ಮೂರು ದಿನದ ಪಾಸ್ ದರ 550 ರೂಗಳಿಂದ 578 ರೂಗಳಿಗೆ ಏರಿಕೆಯಾಗಿದೆ.
ಐದು ದಿನದ ಪಾಸ್ ದರದಲ್ಲೂ ಏರಿಕೆ ಮಾಡಲಾಗಿದ್ದು, ಸ್ಮಾರ್ಟ್ ಕಾರ್ಡ್ ಮೂಲಕ 900 ರೂ ಇದ್ದ ಪಾಸ್ ಈಗ 943 ರೂ ಆಗಿದೆ. ಕ್ಯೂಆರ್ ಕೋಡ್ ಮೂಲಕ 850 ರೂ ಇದ್ದ ಐದು ದಿನದ ಪಾಸ್ ದರ 893 ರೂಗಳಿಗೆ ಹೆಚ್ಚಿಸಲಾಗಿದೆ.
ಪಾಸ್ ದರ ಏರಿಕೆಯಿಂದ ನಿಯಮಿತವಾಗಿ ಮೆಟ್ರೋ ಬಳಸುವ ಪ್ರಯಾಣಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂ ಓದಿ : ಖಾಸಗಿ ಕಂಪನಿ ಬಸ್ ಪಲ್ಟಿ | ಹಲವರಿಗೆ ಗಾಯ



















