ಬೆಂಗಳೂರು : ಖಾಸಗಿ ಕಂಪನಿ ಬಸ್ ಪಲ್ಟಿಯಾಗಿರುವ ಘಟನೆ ಹೆಬ್ಬಾಳ ಬಳಿ ಭದ್ರಪ್ಪ ಲೇಔಟ್ ರಿಂಗ್ ರಸ್ತೆಯಲ್ಲಿ ನಡೆದಿದೆ. ಕಂಪನಿ ಬಸ್ ಜಾಲಹಳ್ಳಿಯಿಂದ ದೇವನಹಳ್ಳಿ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಬೆಳಗ್ಗೆ 5 ಗಂಟೆಗೆ ಉದ್ಯೋಗಿಗಳನ್ನು ಬಸ್ಸಿನಲ್ಲಿ ಕರೆದೊಯ್ಯುತ್ತಿದೆ. ಈ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಂಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಲಿಫ್ಟ್ ಒಳಗೆ ಹೈಡ್ರೋಜನ್ ತುಂಬಿದ ಬಲೂನ್‌ಗಳು ಸ್ಫೋಟ



















