ರಾಮನಗರ : ಈ ಬಜೆಟ್ ನಮ್ಮ ರಾಜ್ಯಕ್ಕೆ ಯಾವುದೇ ಅನುಕೂಲ ಇಲ್ಲ, ಮನರೇಗಾಕ್ಕೂ ಕೂಡಾ ಎಐ ಬಳಕೆ ಮಾಡಿ ಕೂಲಿ ತೀರ್ಮಾನ ಮಾಡ್ತೀವಿ ಎಂದರು. ವ್ಯವಸಾಯದ ಕಾಲದಲ್ಲಿ ಕೂಲಿ ಕೊಡಲಿಲ್ಲ ಎಂದು ಡಿಸಿಎಂ ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ.
ಕನಕಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಮನರೇಗಾಕ್ಕೂ ಕೂಡಾ ಎಐ ಬಳಕೆ ಮಾಡಿ ಕೂಲಿ ತೀರ್ಮಾನ ಮಾಡ್ತೀವಿ ಅಂದ್ರು, ವ್ಯವಸಾಯದ ಕಾಲದಲ್ಲಿ ಕೂಲಿ ಕೊಡಲಿಲ್ಲ ಇವರು. ಎಐನಿಂದ ವ್ಯವಸಾಯಕ್ಕೆ ಪ್ರಯೋಜನ ಇಲ್ಲ. ರೈತರ ಬೆಳೆ ರೇಷ್ಮೆಗೆ ಉತ್ತೇಜನ ಕೊಡಬೇಕು. ಸಕ್ಕರೆ ಬೆಲೆ ಯಾಕೆ ಏರಿಕೆ ಮಾಡ್ತಿಲ್ಲ, ಇದರಿಂದ ರೈತರಿಗೆ ನಷ್ಟ ಆಗ್ತಿದೆ ಎಂದು ಕಿಡಿಕಾರಿದರು.
ಸಕ್ಕರೆ ಬೆಲೆ ಏರಿಸಲಿಲ್ಲ ಅಂದ್ರೆ ಕೋಪರೇಟಿವ್ ಸೆಕ್ಟರ್ ಗಳು ಮುಚ್ಚುವ ಹಂತಕ್ಕೆ ಬರುತ್ತೆ. ನಮ್ಮ ಭಾಗದ ಐದು ಜಿಲ್ಲೆಯಲ್ಲಿ ಕಬ್ಬು ಬೆಳೆಯುತ್ತಾರೆ. ರೈತರಿಗೆ ಕೇಂದ್ರ ಏನ್ ಸಹಾಯ ಮಾಡಿದೆ. 8 ರಿಂದ 9 ವರ್ಷ ಆದ್ರೂ ಸಕ್ಕರೆ ಬೆಲೆ ಏರಿಕೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿಗೆ ಹೈಸ್ಪೀಡ್ ರೈಲು ಘೋಷಣೆ ವಿಚಾರ
ಯಾವ್ ಹೈ ಸ್ಪೀಡ್ ರೈಲು ರೀ ಯಾವ ಸ್ಪೀಡ್ ರೈಲೂ ಬರಲ್ಲ 50:50 ಅಡಿ ಆಗಲ್ಲ, ಬೇಕಿದ್ರೆ 90:10 ಕೊಡಲಿ. ಆಗ ನಾವು 10% ನಾವು ಕೊಡ್ತೇವೆ. ಬೇರೆ ರಾಜ್ಯಗಳಿಗೆ ಅವರೇ ಮಾಡಿಕೊಟ್ಟಿದ್ದಾರೆ. ನಮ್ಮ ರಾಜ್ಯಕ್ಕೂ 90% ಮಾಡಲಿ ಬೆಂಗಳೂರು ಬಗ್ಗೆ ಅತಿಹೆಚ್ಚು ನಿರೀಕ್ಷೆ ಇತ್ತು. ಮೋದಿಯವರೇ ಇದನ್ನ ಗ್ಲೋಬಲ್ ಸಿಟಿ ಅಂತ ಹೇಳಿದ್ರು, ಆ ಗ್ಲೋಬಲ್ ಸಿಟಿಗೆ ಏನು ಒತ್ತು ಕೊಟ್ಟಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡ್ತೀನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಚುನಾವಣೆ | ಅಧ್ಯಕ್ಷರಾಗಿ ಸಿ.ಟಿ ರವಿ, ಉಪಾಧ್ಯಕ್ಷರಾಗಿ ದಿನೇಶ್ ಹೊಸೂರು ಅವಿರೋಧ ಆಯ್ಕೆ



















