ಬೆಂಗಳೂರು : ಬೆಂಗಳೂರು ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಫುಟ್‌ಪಾತ್ ಮೇಲೆ ನಾಯಿ ಸೂಸು ಮಾಡಿತ್ತೆಂಬ ವಿಚಾರಕ್ಕಾಗಿ ಮಹಿಳೆಯರ ನಡುವೆ ಮಾರಾಮಾರಿ ನಡೆದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ರಾತ್ರಿ ವೇಳೆ ಸಾಕಿದ ನಾಯಿ ಮರಿಯೊಂದಿಗೆ ವಾಕಿಂಗ್‌ಗೆ ಬಂದಿದ್ದ ಯುವತಿಯ ನಾಯಿ, ಅಂಗಡಿಯೊಂದರ ಮುಂದೆ ಇದ್ದ ಫುಟ್ ಪಾತ್ ಮೇಲೆ ಮೂತ್ರ ವಿಸರ್ಜನೆ ಮಾಡಿದೆ. ಇದನ್ನು ಗಮನಿಸಿದ ಹಿಂದಿ ಭಾಷೆಯ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ನಾಯಿ ಮಾಲಕಿ ಮತ್ತು ರೆಸ್ಟೋರೆಂಟ್ ಮಾಲೀಕೆಯ ನಡುವೆ ಮೊದಲಿಗೆ ವಾಗ್ವಾದ ನಡೆದಿದೆ.
ನಂತರ ಮಾತಿನ ಚಕಮಕಿ ಕೈಕೈ ಮಿಲಾಯಿಸಿಕೊಳ್ಳುವವರೆಗೆ ತಿರುಗಿದ್ದು, ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು.
ಇದನ್ನೂ ಓದಿ : ಅಕ್ರಮ ವಲಸಿಗರನ್ನ ಬಯಲಿಗೆಳೆದಿದ್ದಕ್ಕೆ ಪೊಲೀಸರಿಂದ ಕಿರುಕುಳ ಆರೋಪ | ವಿಧಾನಸೌಧದ ಬಾಗಿಲಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ



















