ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ದೇಶದಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಪೈಕಿ ಮೂರನೇ ಹಾಗೂ ಕರ್ನಾಟಕದ ಆಸ್ಪತ್ರೆಗಳ ಪೈಕಿ ಪ್ರಥಮ ಸ್ಥಾನ ಪಡೆದಿದೆ. 2025ರಲ್ಲಿ ‘ದಿ ವೀಕ್ ಹನ್ಸಾ ಸಂಶೋಧನಾ ಸಮೀಕ್ಷೆ’ಯಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಭಾರತದಲ್ಲಿ 5ನೇ ಸ್ಥಾನ, ಕ್ಯಾನ್ಸರ್ ಆರೈಕೆಯಡಿ ಸರ್ಕಾರಿ ಆಸ್ಪತ್ರೆಗಳ ಪೈಕಿ ಕಿದ್ವಾಯಿ 3ನೇ ಸ್ಥಾನ ಪಡೆದಿರುವ ಈ ಹಿನ್ನೆಲೆ ಕಿದ್ವಾಯಿ ಆಸ್ಪತ್ರೆಯ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

2025ರಲ್ಲಿ ದ ವೀಕ್ ಹನ್ಸಾ ಸಂಶೋಧನಾ ಸಮೀಕ್ಷೆ ವರದಿ ಇದನ್ನು ತಿಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವದರ್ಜೆಯ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಪೈಕಿ ಕಿದ್ವಾಯಿ ಮೂರನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ಚಂಡಿಗಢದ ಪಿಜಿಐಎಂಇಆರ್ ಹಾಗೂ 2ನೇ ಸ್ಥಾನದಲ್ಲಿ ದೆಹಲಿಯ ಏಮ್ಸ್ ಇದೆ. ಒಟ್ಟಾರೆ ಖಾಸಗಿ ಸರ್ಕಾರಿ ಸೇರಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಭಾರತದಲ್ಲಿ ಐದನೇ ಸ್ಥಾನ ಪಡೆದಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ | ಹೊಸ ಮಾರ್ಗಸೂಚಿ ಪಾಲಿಸುವಂತೆ ಸೂಚನೆ!



















