ಬೆಂಗಳೂರು: ಕಾರಿನ ಸೈಲೆನ್ಸರ್ ಆಲ್ಟರ್ ಮಾಡಿ ಸಾರ್ವಜನಿಕವಾಗಿ ಸ್ಥಳಗಳಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು ಬರೋಬ್ಬರಿ 1.11 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಬೆಂಗಳೂರಿನ ಹೆಣ್ಣೂರು ನಿವಾಸಿಯಾಗಿರೋ ವ್ಯಕ್ತಿಯೊಬ್ಬರು, ಕಾರಿನ ಸೈಲೆನ್ಸರ್ ಆಲ್ಟರ್ ಮಾಡಿಸಿದ್ದರು. ಜೊತೆಗೆ ಕಾರಿನ ಮೇಲೆ ಸ್ಟಿಕ್ಕರ್ ಮಾಡಿಸಿದ್ದರು. ಹಾಗೇ ಆಲ್ಟರ್ ಮಾಡಿಸಿದ ಕಾರಿನಲ್ಲಿ ಸಾರ್ವಜನಿಕವಾಗಿ ಕರ್ಕಶವಾಗಿ ಶಬ್ದ ಮಾಡಿ ತೊಂದರೆ ಕೊಡುತ್ತಿದ್ದರು. ಅಲ್ಲದೇ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
ಇದನ್ನು ಗಮನಿಸಿದ ಹೆಣ್ಣೂರು ಟ್ರಾಫಿಕ್ ಪೊಲೀಸರು ಕಾರನ್ನು ಪತ್ತೆ ಮಾಡಿ, ದಂಡ ವಿಧಿಸಿದ್ದಾರೆ. ಆ ಕಾರಿನ ಮೇಲೆ ಈ ಹಿಂದೆ ಕೂಡ ನಿಮಯ ಉಲ್ಲಂಘನೆ ಮಾಡಿದ ಕೇಸ್‌ಗಳಿವೆ. ಅದೆಲ್ಲಾ ಸೇರಿ 1.11 ಲಕ್ಷ ರೂ. ದಂಡ ಕಟ್ಟಿಸಿದ್ದಾರೆ.
ಯಲಹಂಕ ಆರ್‌ಟಿಓ ಅಧಿಕಾರಿಗಳಿಂದ ಕಾರು ಸೀಜ್ ಮಾಡಲಾಗಿದೆ. ಕೇರಳ ನೋಂದಣಿಯ ಕಾರು ಇದಾಗಿದ್ದು. ಕೇರಳ ಮೂಲದ ವ್ಯಕ್ತಿ ಬಳಸುತ್ತಿದ್ದ ಎಂದು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೆಸರಿನಲ್ಲಿ ನಕಲಿ ಖಾತೆ, ಹಣಕ್ಕೆ ಬೇಡಿಕೆ!


















