ಬಾಗಲಕೋಟೆ : ಬೀದಿನಾಯಿ ಕಚ್ಚಿ ಗಂಭೀರ ಗಾಯಗೊಂಡಿದ್ದ 10 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಅಲೈನಾ ಲೋಕಾಪುರ ಮೃತ ಬಾಲಕಿ
ಡಿಸೆಂಬರ್ 27ರಂದು ಬಾಗಲಕೋಟೆಯ ನವನಗರದ ಸೆಕ್ಟರ್ ನಂ. 15ರಲ್ಲಿ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ ಮಾಡಿತ್ತು. ಬಾಲಕಿಯ ಕಣ್ಣು, ಮೂಗು ಮುಖದ ಮೇಲೆ ಗಂಭೀರ ಗಾಯವಾಗಿದ್ದರಿಂದ ಅಂದೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಗ್ಯ ಮತ್ತಷ್ಟು ಹದೆಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಅಲೈನಾ ಮೃತಪಟ್ಟಿದ್ದಾಳೆ.
ಬಾಗಲಕೋಟೆಯಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದ್ದು, ಬೀದಿನಾಯಿ ಹಾವಳಿ ತಡೆಗಟ್ಟುವಲ್ಲಿ ಬಾಗಲಕೋಟೆ ನಗರಸಭೆ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವಿಫಲವಾಗಿದೆ ಜನರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಬಿಬಿಎಲ್ ಮೈದಾನದಲ್ಲಿ ‘ಜೋಕರ್’ ಆದ ಹಸನ್ ಅಲಿ | ಪಾಕಿಸ್ತಾನಿ ಆಟಗಾರನ ಯಡವಟ್ಟಿಗೆ ಅಡಿಲೇಡ್ ಸ್ಟ್ರೈಕರ್ಸ್ ಕಂಗಾಲು!



















