‘ಟಾಕ್ಸಿಕ್’ ಸಿನಿಮಾ ಟೀಸರ್ ನೋಡಿದ ನಟ ಕಿಚ್ಚ ಸುದೀಪ್ ಅವರು ಯಶ್‌ಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಟಾಕ್ಸಿಕ್ ಟೀಸರ್ ಅನ್ನ ಸುದೀಪ್ ಮೆಚ್ಚಿಕೊಂಡು ಟ್ವಿಟರ್‌ನಲ್ಲಿ ಯಶ್‌ಗೆ ಹಾರೈಸಿದ್ದಾರೆ.
ಸುದೀಪ್ ಟ್ವೀಟ್ ಹೀಗಿದೆ..
ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದು ಸುದೀಪ್ ಹೇಳಿದ್ದಾರೆ. ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದ್ದು, ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.
ಇನ್ನು ‘ಟಾಕ್ಸಿಕ್’ ಟೀಸರ್ ತುಂಬಾನೇ ಬೋಲ್ಡ್ ಆಗಿದೆ. ಇದನ್ನು ಅನೇಕರು ಟೀಕಿಸಿದ್ದಾರೆ. ಈ ಟೀಕೆಗಳು ಕೇಳಿ ಬಂದಿದ್ದರಿಂದಲೇ ‘ಅಲೆಗಳ ವಿರುದ್ಧ ಹೋಗಲು ಸಾಕಷ್ಟು ಸಮಯ ಬೇಕು’ ಎಂದು ಸುದೀಪ್ ಟ್ವೀಟ್ ಮಾಡಿರಬಹುದು ಎಂದು ಫ್ಯಾನ್ಸ್ ಉಹಿಸಿದ್ದಾರೆ.
ಹಾಗೆಯೇ ಯಶ್ ಅವರಿಗೆ ಸುದೀಪ್ ವಿಶ್ ಮಾಡಿದ್ದು ಅನೇಕರಿಗೆ ಅಚ್ಚರಿ ತಂದಿದೆ. ‘ಇದನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಇದು ನಮ್ಮ ಕಿಚ್ಚ ಸುದೀಪ್. ಯಶ್ ಹಾಗೂ ಸುದೀಪ್ ಮಧ್ಯೆ ಇರುವ ಬಾಂಡ್ನ ಅಭಿಮಾನಿಗಳೇ ಹಾಳು ಮಾಡಿದರು’ ಎಂದು ಕೆಲವರು ಹೇಳಿದ್ದಾರೆ.
ಒಟ್ಟಿನಲ್ಲಿ ಟಾಕ್ಸಿಕ್ ಚಿತ್ರದ ಟೀಸರ್ ವೀವ್ಸ್ ಲಕ್ಷ ಲಕ್ಷ ಆಗಿದೆ. ಒಂದು ಗಂಟೆಯಲ್ಲಿಯೇ ಒಂದು ಮಿಲಿಯನ್ ವೀವ್ಸ್ ಬಂದಿವೆ. ಚಿತ್ರರಂಗದಲ್ಲಿ ಸುನಾಮಿಯಯನ್ನೇ ಎಬ್ಬಿಸಿದೆ.
ಇದನ್ನೂ ಓದಿ : ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ದಾಖಲೆ ಮುರಿಯಲು ಸಾಧ್ಯವಿಲ್ಲ | ಜೂಲನ್ ಗೋಸ್ವಾಮಿ



















