ಬೆಂಗಳೂರು : ನಗರದ ಕೋಗಿಲು ಲೇಔಟ್‌ನಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆ ಇದೀಗ ಹೊಸದೊಂದು ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಲಾಗಿದೆ ಎಂಬ ಕಾರಣಕ್ಕೆ ಸರ್ಕಾರ ಒಟ್ಟು 167 ಮನೆಗಳನ್ನು ನೆಲಸಮಗೊಳಿಸಿತ್ತು. ಆದರೆ, ಈಗ ಪರಿಹಾರವಾಗಿ ಹೊಸ ಮನೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 250 ದಾಟಿದ್ದು, ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಸರ್ಕಾರ ತೆರವುಗೊಳಿಸಿದ್ದು ಕೇವಲ 167 ಮನೆಗಳನ್ನು ಮಾತ್ರ. ಆದರೆ ಹೊಸ ಮನೆಗಾಗಿ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿರುವುದು ನೈಜವಾಗಿ ಮನೆ ಕಳೆದುಕೊಂಡವರಲ್ಲಿ ಆತಂಕ ಮೂಡಿಸಿದೆ. ‘ನಾವು ಮನೆ ಕಳೆದುಕೊಂಡವರು ಕೇವಲ 167 ಕುಟುಂಬಗಳು, ಹಾಗಿದ್ದರೆ ಈ ಉಳಿದ 80ಕ್ಕೂ ಹೆಚ್ಚು ಅರ್ಜಿಗಳು ಯಾರದ್ದು? ಕಿಡಿಗೇಡಿಗಳು ಪರಿಹಾರ ಪಡೆಯಲು ಸುಳ್ಳು ಅರ್ಜಿ ಸಲ್ಲಿಸಿದ್ದಾರೆಯೇ?’ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಗೊಂದಲದಿಂದಾಗಿ ನಿಜವಾದ ಸಂತ್ರಸ್ತರಿಗೆ ಮನೆ ಸಿಗುತ್ತದೆಯೇ ಎಂಬ ಆತಂಕ ಶುರುವಾಗಿದೆ.

ಕೋಗಿಲು ಲೇಔಟ್‌ನ ವಸೀಂ ಕಾಲೋನಿ, ಫಕೀರ್ ಕಾಲೋನಿಯಲ್ಲಿ ಮನೆಗಳ ಡೆಮಾಲಿಷನ್ ಮಾಡಲಾಗಿದ್ದು, ವಸೀಂ ಕಾಲೋನಿಯಲ್ಲಿ 23 ಹಿಂದೂ, ಓರ್ವ ಕ್ರಿಶ್ಚಿಯನ್, 58 ಮುಸ್ಲಿಂ ಕುಟುಂಬ ವಾಸ ಮಾಡುತ್ತಿತ್ತು. ಫಕೀರ್ ಕಾಲೋನಿಯಲ್ಲಿ 8 ಹಿಂದು, 98 ಮುಸ್ಲಿಂ ಕುಟುಂಬ ವಾಸಿಸುತ್ತಿದ್ದರು. ಎರಡೂ ಕಾಲೋನಿಯಲ್ಲಿದ್ದ ಒಟ್ಟು 167 ಮನೆಗಳನ್ನ ಡೆಮಾಲಿಷನ್ ಮಾಡಿರುವ GBA, ಬೆಂಗಳೂರು ಉತ್ತರ ತಾಲೂಕಿನ ಬೈಯಪ್ಪನಹಳ್ಳಿಯಲ್ಲಿ ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಿದೆ.
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪ್ರತಿ ಮನೆಗೆ 11.20 ಲಕ್ಷ ವೆಚ್ಚ ಮಾಡಿ ವಸತಿ ಸಮುಚ್ಚಯ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಕೋಗಿಲು ಕ್ರಾಸ್ ನಿರಾಶ್ರಿತರಿಗೆ ನಿವೇಶನ ಹಂಚಿಕೆಗೆ ಸಿದ್ಧತೆ ಮಾಡಲಾಗಿದೆ. ಸಾಮಾನ್ಯವಾಗಿ ಸರ್ಕಾರದಿಂದ ಮನೆ ಪಡೆಯುವವರಿಗೆ ಸಬ್ಸಿಡಿ ಸಿಗುತ್ತೆ. ಸದ್ಯ ಸರ್ಕಾರದ ಈ ನಿರ್ಧಾರ ರಾಜ್ಯಕ್ಕೆ ಆರ್ಥಿಕ ಹೊಡೆತ ಬೀಳಲಿದೆ.
ಸರ್ಕಾರದಿಂದ ಯಾವ ಸಮುದಾಯಕ್ಕೆ ಎಷ್ಟು ಸಬ್ಸಿಡಿ..?
ಸಾಮಾನ್ಯ ವರ್ಗಕ್ಕೆ ₹5 ಲಕ್ಷ.
ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)ಕ್ಕೆ – ₹8.70 ಲಕ್ಷ.
ಹಿಂದೂ ಮನೆ – 31
ಮುಸ್ಲೀಂ ಮನೆ – 156
ಕ್ರಿಶ್ಚಿಯನ್ ಮನೆ – 1
ಒಟ್ಟು ಮನೆ – 188
ಹಿಂದೂ ಮನೆ – 31
- ಮನೆಗಳಿಗೆ ತಲಾ ಐದು ಲಕ್ಷ ಸಬ್ಸಿಡಿಯಂತೆ ₹1,55,00,000 ಕೋಟಿ..
ಮುಸ್ಲೀಂ ಮನೆ – 156
- ಮನೆಗಳಿಗೆ ತಲಾ ₹8.70 ಲಕ್ಷ ಸಬ್ಸಿಡಿಯಂತೆ ₹13,57,20,000 ಕೋಟಿ..
ಕ್ರಿಶ್ಚಿಯನ್ ಮನೆ – 1
- ಮನೆಗಳಿಗೆ ತಲಾ ₹8.70 ಲಕ್ಷ ಸಬ್ಸಿಡಿಯಂತೆ ₹8.70 ಲಕ್ಷ..
ಅಂದಾಜು ಹೊರೆ – 15,20,90,000 ಕೋಟಿ..
ಇದನ್ನೂ ಓದಿ : ಉಡುಪಿ ಪೊಲೀಸರ ವಿಶೇಷ ಕಾರ್ಯಾಚರಣೆ | ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಂದ 9.62 ಲಕ್ಷ ದಂಡ ವಸೂಲಿ!


















