ನವದೆಹಲಿ : ದೆಹಲಿಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ನಗರದ ಬಾತ್ರಾ ಕಾಲೋನಿಯಲ್ಲಿ ಮನೆಯ ಎದುರು ಕುಳಿತಿದ್ದ ವೃದ್ಧೆ ಮೇಲೆ ಕೋತಿಗಳು ಏಕಾಏಕಿ ದಾಳಿ ನಡೆಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಸತಿ ಕಟ್ಟಡದ ಪ್ರವೇಶದ್ವಾರದ ಬಳಿ ಗೋಡೆಯ ವಿರುದ್ಧ ಇರಿಸಲಾದ ಕುರ್ಚಿಯ ಮೇಲೆ ವೃದ್ಧ ಮಹಿಳೆ ಶಾಂತವಾಗಿ ಕುಳಿತಿದ್ದರು. ಈ ವೇಳೆ ಮಹಿಳೆಯ ಕಡೆಗೆ ಓಡಿ ಬಂದ ಕೋತಿಗಳು ಆಕ್ರಮಣಕಾರಿಯಾಗಿ ಆಕೆಯ ದೇಹದ ಹಾರಿ ಕಚ್ಚಿದೆ. ಕೆಲವು ಕ್ಷಣಗಳ ನಂತರ ಇಡೀ ಹಿಂಡು ಮಹಿಳೆಯ ತಲೆಯ ಮೇಲೆ ಆಕೆಯ ಕಾಲುಗಳ ಮೇಲೆ ದಾಳಿ ಮಾಡಿದೆ.
ಇದನ್ನೂ ಓದಿ : ರಾಯಚೂರು | ಕಾಲುವೆಯಲ್ಲಿ ಮುಳುಗಿ ಇಬ್ಬರು ಮಹಿಳೆಯರು ಸಾವು



















