ಹಾವೇರಿ : ಮಹಿಳೆಯರಿಗೆ ಮನೆಹಾಳು ಬುದ್ಧಿ ಕಲಿಸೋದೆ ಧಾರವಾಹಿಗಳು. ಹಿಂದಿನ ಬಾಗಿಲಿನಿಂದ ಕಳ್ಳ ಬಂದು ಕಳ್ಳತನ ಮಾಡಿದ್ರು ಗೊತ್ತಾಗಲ್ಲ ಎಂದು ಹಾವೇರಿ ಎಸ್ ಪಿ ಯಶೋಧ ವಂಟಗೋಡಿ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಹುಕ್ಕೇರಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಮಾತನಾಡಿ, ಧಾರವಾಹಿಯವರು ನನ್ನ ಬಗ್ಗೆ ಬೇಸರವಾದರೂ ಪರವಾಗಿಲ್ಲ. ಮಹಿಳೆಯರಿಗೆ ಮನೆಹಾಳು ಬುದ್ಧಿ ಕಲಿಸುತ್ತಿರೋದೆ ಧಾರವಾಹಿಗಳು. ಧಾರವಾಹಿಗಳನ್ನ ನಾನು ನೋಡಬೇಡಿ ಎಂದು ಹೇಳಲ್ಲ, ಮಹಿಳೆಯರು ಧಾರವಾಹಿಗಳಿಗೆ ಎಷ್ಟು ಅಡಿಕ್ಟ್ ಆಗಿದ್ದಾರೆ ಎಂದರೆ, ಹಿಂದಿನ ಬಾಗಿಲಿನಿಂದ ಕಳ್ಳ ಬಂದು ಕಳ್ಳತನ ಮಾಡಿದ್ರು ಗೊತ್ತಾಗಲ್ಲ ಇಂತಹ ಉದಾಹರಣೆಗಳು ಸಾಕಷ್ಟಿವೆ ಎಂದಿದ್ದಾರೆ.
ಮಕ್ಕಳಿಗೆ ಓದುವಂತೆ ಹೇಳಿ ಕೂರಿಸುವುದು.ನೀವು ಧಾರವಾಹಿ ನೋಡುವುದು. ಮಕ್ಕಳಿಗೆ ಓದಿನ ಬಗ್ಗೆ ಗಮನ ಹೇಗೆ ಹರಿಯುತ್ತದೆ ಎಂದು ಪ್ರಶ್ನೆ ಮಾಡುವ ಮೂಲಕ ಧಾರವಾಹಿಗಳ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಹೆಣ್ಣು ಶಿಶು ಹುಟ್ಟಿತು ಎಂಬ ಒಂದೇ ಕಾರಣಕ್ಕೆ.. ದೇವಸ್ಥಾನದ ಆವರಣದಲ್ಲಿ ಬಿಟ್ಟು ಹೋದ ಪಾಪಿಗಳು



















