ಧಾರವಾಡ : ಧಾರವಾಡದಲ್ಲಿ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಧಾರವಾಡದ ನಿರ್ಮಲನಗರ ಬಳಿಯ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ.
ಅಭಿಲಾಷ್ ಎಂಬ ಅಂಗಡಿ ಮಾಲೀಕನ ಮೇಲೆ ಹಲ್ಲೆ. ನಾನು ಇಲ್ಲೇ ಲೋಕಲ್ ಎಂದು ಅವಾಜ್ ಹಾಕಿ, ಎಲ್ಲಿಂದಲೋ ಬಂದವ ನೀನು ಎಂದು ಕಬ್ಬಿಣದ ರಾಡ್ ನಿಂದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಪುಡಾರಿಗಳು ಎಂದು ಅಭಿಲಾಷ್ ಆರೋಪಿಸಿದ್ದಾರೆ. ಅಲ್ಲದೇ ಅಂಗಡಿಯ ಸಾಮಾಗ್ರಿಗಳನ್ನು ಹಾನಿ ಮಾಡಿ ಪರಾರಿಯಾಗಿದ್ದಾರೆ.
ಆಯನ್ ನದಾಫ್ ಎಂಬಾತಾನಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೌಟುಂಬಿಕ ಕಲಹ | ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ!



















