ಕೊಪ್ಪಳ : ಪಾರಿವಾಳ ನೋಡಿ ಹಿಡಯಲು ಹೋಗಿದ್ದ ಮಗು ಮೊದಲನೆ ಮಹಡಿಯಿಂದ ಜಾರಿ ಕೆಳಗಡೆ ಬಿದ್ದಿರುವ ಘಟನೆ ಕೊಪ್ಪಳದ ಹಮಾಲರ ಕಾಲೋನಿಯಲ್ಲಿ ನಡೆದಿದೆ.
ಮಹ್ಮದ್ ಹ್ಯಾರಿಸ್ 6 ವರ್ಷದ ಬಾಲಕ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಮಗು ಬೀಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಟಾವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಬಿದ್ದ ಕೂಡಲೇ ಮಗುವನ್ನು ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಗರದ ಕೆ ಎಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಕೊಪ್ಪಳದ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ದೆಹಲಿ ಪ್ರತಿಭಟನೆ ವಿವಾದ : ಭಾರತದ ಸ್ಪಷ್ಟನೆ ಬೆನ್ನಲ್ಲೇ ಬಾಂಗ್ಲಾ ಉದ್ಧಟತನ, ರಾಜತಾಂತ್ರಿಕ ಕಾರ್ಯಾಚರಣೆ ಕಡಿತತ ಎಚ್ಚರಿಕೆ



















