ಬೆಂಗಳೂರು : ಕುರ್ಚಿ ಕದನದ ಮಧ್ಯೆ ಡಿಕೆಶಿ ದೆಹಲಿ ಪ್ರಯಣಕ್ಕೆ ಸಜ್ಜಾಗಿದ್ದಾರೆ. ನಾಳೆ ರಾಹುಲ್ ಗಾಂಧಿ ಭೇಟಿಯಾಗಿ ನಾಯಕತ್ವ, ಯತೀಂದ್ರ ಹೇಳಿಕೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.
ಮೀಟಿಂಗ್ ಬಳಿಕ ಹೈಕಮಾಂಡ್ ಭೇಟಿಯಾಗುವ ಸಾಧ್ಯತೆ ಇದೆ. ಈ ಸಭೆಯಲ್ಲಿ ರಾಜ್ಯದ ನೀರಾವರಿ ಯೋಜನೆ ಕುರಿತು ಮಾತನಾಡಲಿದ್ದಾರೆ. ಅಧಿವೇಶನದ ವೇಳೆ ಯತೀಂದ್ರ ಮಾತು, ನಾನೇ 5 ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಹಾಗೂ ಡಿನ್ನರ್ ಪಾರ್ಟಿ ಸೇರಿ ಹಲವು ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದಾರೆ.
ಅಧಿಕಾರ ಹಂಚಿಕೆ ಚರ್ಚೆ ನಡೆಯುತ್ತಿರುವಾಗಲೇ ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ ನಡೆದಿದ್ದು ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು ದೆಹಲಿಗೆ ಹಾರಿದ್ದರು. 8 ಜನರ ಒಂದೊಂದು ತಂಡವನ್ನಾಗಿ ಮಾಡಿ ಡೆಲ್ಲಿಗೆ ಪ್ರಯಾಣ ಬೆಳೆಸಿದರು. ಆದರೆ ಆ ಪ್ಲ್ಯಾನ್ ಫೇಲ್ ಆಗಿತ್ತು. ಇದೀಗ ಡಿಕೆ ಮತ್ತೊಂದು ಪ್ಲ್ಯಾನ್ ರೆಡಿ ಮಾಡಿ ದೆಹಲಿಗೆ ಹಾರಲು ರೆಡಿಯಾಗಿದ್ದಾರೆ.
ಇದನ್ನೂ ಓದಿ : ಒಸ್ಮಾನ್ ಹಾದಿ ಹತ್ಯೆಯ ಬೆನ್ನಲ್ಲೇ ಬಾಂಗ್ಲಾದ ಮತ್ತೊಬ್ಬ ನಾಯಕನ ತಲೆಗೆ ಗುಂಡೇಟು



















