ಮೈಸೂರು: ಪತ್ನಿಯನ್ನು ಕೊಲೆ ಮಾಡುವಂತೆ ಪತಿಯೇ ಸುಫಾರಿ ನೀಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದೀಗಾ ಪತಿ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿರು ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ.
ಪತ್ನಿ ನಾಗರತ್ನ ವರ್ತನೆಯಿಂದ ಬೇಸತ್ತಿದ್ದ ಪತಿ ಮಹೇಶ್, ಪತ್ನಿಯನ್ನು ಕೊಲ್ಲುವಂತೆ ವಿರಾಜಪೇಟೆ ಮೂಲದ ಭಾಸ್ಕರ್, ಅಭಿಷೇಕ್ ಎಂಬುವರಿಗೆ ಸುಫಾರಿ ನೀಡಿದ್ದನ್ನು.
ಆರೋಪಿ ಮಹೇಶ್ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ, ಪತ್ನಿ ನಾಗರತ್ನ, ಗಂಡನ ಸಂಪಾದನೆಯನ್ನು ಬಡ್ಡಿಗೆ ಬಿಟ್ಟು, ಗಂಡನಿಗೆ ಹಣವು ನೀಡದೆ, ಗಂಡನಿಗೆ ಕಿಂಚಿತ್ತು ಮರ್ಯಾದೆ ಕೊಡದೆ ಹೀನಾಯವಾಗಿ ಕಾಣುತ್ತಿದ್ದಳು ಇದರಿಂದ ಬೇಸಗೊಂಡ ಪತಿ ಮಹೇಶ್ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.
ಈ ಹಿನ್ನಲೆ, ಗೊತ್ತಿರುವ ಹುಡುಗರಿಗೆ ಮನೆಗೆ ನುಗ್ಗಿ ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಹೆಂಡತಿಯನ್ನು ಕೊಲೆ ಮಾಡಿ ಎಂದು ಪ್ಲಾನ್ ರೂಪಿಸಿದ್ದ. ಈ ಹಿನ್ನಲೆ ಮಂಗಳವಾರ ರಾತ್ರಿ ಮನೆಗೆ ನುಗ್ಗಿದ ಯುವಕರು, ನಾಗರತ್ನ ಮೇಲೆ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಾಕಲು ಯತ್ನಿಸಿದ್ದಾರೆ.
ಈ ವೇಳೆ ಮನೆಯ ಕೆಲವಸ್ತುಗಳು ಬೆಂಕಿಗಾವುತಿಯಾಗಿದ್ದು, ಗಾಯಗೊಂಡ ನಾಗರತ್ನಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಪೊಲೀಸ್ ತನಿಖೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲ್ಲುವಂತೆ ಸುಫಾರಿ ನೀಡಿದ್ದು ಬೆಳಕಿಗೆ ಬಂದಿದೆ. ಸದ್ಯ ಈ ಘಟನಾ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಅಂತರ್ ಧರ್ಮೀಯ ವಿವಾಹದ ಕಲಹ : ಹೆತ್ತವರನ್ನೇ ಹತ್ಯೆಗೈದು, ದೇಹ ತುಂಡರಿಸಿ ನದಿಗೆ ಎಸೆದ ಎಂಜಿನಿಯರ್ ಪುತ್ರ



















