ಬೆಂಗಳೂರು : ವೀಕೆಂಡ್‌ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ ವೇಳೆ ಪೋಲಿಸರು ಬಂದಿದ್ದು, ಭಯಭೀತಳಾಗಿ ಯುವತಿಯೊಬ್ಬಳು ಹೊಟೇಲ್‌ನ ಬಾಲ್ಕನಿಯಿಂದ ಹಾರಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಕುಂದಲಹಳ್ಳಿ ನಿವಾಸಿ ವೈಷ್ಣವಿ (21) ಗಾಯಗೊಂಡ ಯುವತಿ. ಸದ್ಯ ಸಾವು ಬದುಕಿನ ನಡುವೆ ಯುವತಿ ಹೋರಾಟ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಹೆಚ್ಎಎಲ್‌ನ ಎಇಸಿಎಸ್ ಲೇಔಟ್‌ನ ಹೊಟೇಲ್‌ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಹೋಗಿದ್ದಳು. ಎಂಟು ಜನ ಸ್ನೇಹಿತರು ಸೇರಿ ಪಾರ್ಟಿ ಮಾಡಿದ್ದು, ಪಾರ್ಟಿಗಾಗಿ ಮೂರು ರೂಂಗಳನ್ನ ಸ್ನೇಹಿತರು ಬುಕ್ ಮಾಡಿದ್ದಾರೆ. ಬಳಿಕ ಜೋರಾಗಿ ಹಾಡು ಹಾಕಿ ಯುವಕ ಯುವತಿಯರು ಡ್ಯಾನ್ಸ್ ಮಾಡಿದ್ದಾರೆ. ಹಿಂಸೆ ತಾಳಲಾರದೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಹೊಯ್ಸಳ ಪೋಲಿಸರು ಬಂದದ್ದನ್ನು ನೋಡಿ ಹೋಟೇಲ್‌ನ ಬಾಲ್ಕನಿಯಿಂದ ಹಾರಿದ್ದಾಳೆ.
ಹಾರಿದ ಯುವತಿ ಕಬ್ಬಿಣದ ಗ್ರೀಲ್ಸ್ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾಳೆ. ಬಳಿಕ ಯುವತಿಯನ್ನ ಗೆಳೆಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕರ ಬಳಿ ಹಣ ಕೇಳಿದ್ರ ಪೊಲೀಸರು.?
ಪಾರ್ಟಿ ವಿಚಾರ ತಿಳಿದು ಹೊಯ್ಸಳ ಸಿಬ್ಬಂದಿ ಹೊಟೇಲ್‌ಗೆ ಬಂದಿದ್ದು, ಈ ವೇಳೆ ಪಾರ್ಟಿ ವಿಡಿಯೋ ತೋರಿಸಿ ದೂರು ಬಂದಿದೆ ಎಂದಿದ್ದಾರೆ. ನಂತರ ಯುವಕರ ಬಳಿ ಪೊಲೀಸರು ಹಣ ಕೇಳಿದ್ದಾರೆ. ಯುವಕರು ಪೋನ್ ಪೇ ಮಾಡುತ್ತೀವಿ ಎಂದಿದ್ದಾರೆ. ಎಟಿಎಂನಲ್ಲಿ ಹಣ ತರುವುದಾಗಿ ಯುವಕರು ಹೋಗಿದ್ದು, ಈ ವೇಳೆ ಹೊಟೇಲ್‌ನಿಂದ ಯುವತಿ ಹಾರಿದ್ದಾಳೆ.
ಸದ್ಯ ಪೊಲೀಸರು ಹಣ ಕೇಳಿದ ಬಗ್ಗೆ ಯುವಕ ಆರೋಪಿಸಿದ್ದಾನೆ. ಸದ್ಯ ಘಟನೆ ಬಗ್ಗೆ ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಘಟನೆ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಭಾರತ-ದಕ್ಷಿಣ ಆಫ್ರಿಕಾ 3ನೇ ಟಿ20 : ವೈಯಕ್ತಿಕ ಕಾರಣಗಳಿಂದ ಬುಮ್ರಾ ಗೈರು ; ಸರಣಿಯಿಂದಲೇ ಹೊರಗುಳಿಯುವ ಸಾಧ್ಯತೆ?


















