ತುಮಕೂರು : ಅದೊಂದು ಅದೃಷ್ಟ ಗೃಹಮಂತ್ರಿ ಆಗಿರುತ್ತಾರೆ ಅನ್ನೋ ಕನಸಿರಲಿಲ್ಲ, ಪರಮೇಶ್ವರ್ ಸಿಎಂ ಆಗಬೇಕು ಎಂದು ಸೋಮಣ್ಣ ಹೇಳಿದ್ದಾರೆ.
ಹೆಗ್ಗೆರೆ ಮೇಲುಸೇತುವೆ ಕಾಮಗಾರಿ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಸೋಮಣ್ಣ, ಅದೊಂದು ಅದೃಷ್ಟ ಗೃಹಮಂತ್ರಿ ಆಗಿರುತ್ತಾರೆ ಅನ್ನೋ ಕನಸಿರಲಿಲ್ಲ. ಎಲ್ಲೋ ಒಂದು ಕಡೆ ನನಗೆ ಆಸೆ ಇದೆ. ಸುರೇಶ್ ಗೌಡ ಹೇಳಿದ್ದು ನೂರಕ್ಕೆ ನೂರು ಸತ್ಯ, ನನಗೂ ವೈಯಕ್ತಿಕವಾಗಿ ಆಸೆ ಇದೆ, ಪರಮೇಶ್ವರ್ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಅಂತಾ ನಾನೊಬ್ಬನಿಗೆ ಆಸೆ ಇರೋದಕ್ಕಿಂತ ಹೆಚ್ಚಾಗಿ, ತುಮಕೂರು ಜಿಲ್ಲೆಯ ಮಹಾಜನತೆಗೂ ಕೂಡಾ ಇದೆ ಹೇಳಿದ್ದಾರೆ.
ನಿಮ್ಮ ಕ್ಷೇತ್ರದ ಡಿಕೆ ಶಿವಕುಮಾರ್ ಸಹ ಇದ್ದಾರೆ ಎಂದ ಸುರೇಶ್ ಗೌಡ
ಅವರು ಇರಲಿ ಬಿಡಪ್ಪಾ ಸೆಕೆಂಡ್ರಿ ಅದು ಅಂದ ಸೋಮಣ್ಣ. ಶಿವಕುಮಾರ್ ಏನಾಗಬೇಕು ಅನ್ನೋದು ಹಣೆಬರಹ ಏನಾಗುತ್ತೆ ಅನ್ನೋದು ದೊಡ್ಡದು. ನಡುವಳಿಕೆ ಇನ್ನೂ ದೊಡ್ಡದು. ಡಿಕೆ ನಡುವಳಿಕೆ ಟಾಂಗ್ ಕೊಟ್ಟ ಸೋಮಣ್ಣ. ದೇಶದ ವ್ಯವಸ್ಥೆಯಲ್ಲಿ ಬಲವರ್ದನೆ ಆಗೋದಕ್ಕೆ ಏನೆಲ್ಲಾ ಮಾಡಬಹುದು. ನಾನು ಅನಿರೀಕ್ಷಿತವಾಗಿ ಇಲ್ಲಿಗೆ ಬಂದೆ. ನನಗೆ ಕಾಯ ವಾಚ ಮನಸ ಬಿಜೆಪಿ ಯಾವ ರೀತಿ ಸಹ ಮಾಡಿರುವ ಬಹುತೇಕ ಕಾಂಗ್ರೇಸ್‌ನ ಒಂದು ಭಾಗವು ಕೂಡಾ ಸಹಾಯ ಮಾಡಿದ್ದೀರಾ ನಾನು ನಿಮಗೆ ಅಭಾರಿಯಾಗಿರುತ್ತೀನಿ. ತುಂಬಾ ದೊಡ್ಡ ಧನ್ಯವಾಗಳನ್ನು ಸಮರ್ಪಣೆ ಮಾಡ್ತೀನಿ ಎಂದಿದ್ದಾರೆ.
ರಾಜಕಾರಣ ಅನ್ನೋದು ಅದೃಷ್ಟ. ನಾನು ಮಂತ್ರಿಯಾದ ಮೇಲೆ ನನಗೆ ಮೊದಲು ಕರೆಮಾಡಿದ್ದು ಪರಮೇಶ್ವರ್, ನನಗೆ ಸಂತೋಷ ಆಗಿದೆ ಸೋಮಣ್ಣ ಮಂತ್ರಿ ಆಗಿದ್ಯಾ ಒಳ್ಳೆ ಇಲಾಖೆ ಸಿಕ್ಕಿದೆ ಅಂದರು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಹೊಸ ಸಂಹಿತೆ ಬಂದರೂ ನಿಮ್ಮ ಟೇಕ್ ಹೋಲ್ ಸ್ಯಾಲರಿ ಸೇಮ್



















