ಬೆಳಗಾವಿ : ರಾಜ್ಯದ ಸರ್ಕಾರಿ ಇಲಾಖೆಯಲ್ಲಿ 2.88 ಲಕ್ಷ ಹುದ್ದೆಗಳು ಖಾಲಿ ಇವೆ. ಖಾಲಿ ಇರೋ ಹುದ್ದೆಗಳನ್ನ ಹಂತ ಹಂತವಾಗಿ ಭರ್ತಿ ಮಾಡೋದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಪ್ರಶ್ನೆ ಕೇಳಿದರು. ಸರ್ಕಾರದಲ್ಲಿ ವಿವಿಧ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ಆದಷ್ಟೂ ಬೇಗ ಖಾಲಿ ಹುದ್ದೆ ತುಂಬಬೇಕು. 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ನಿಗಮಗಳು, ವಿಶ್ವವಿದ್ಯಾಲಯಗಳಲ್ಲಿ ಹುದ್ದೆ ಖಾಲಿ ಇವೆ. ಧಾರವಾಡ, ವಿಜಯಪುರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಕಾಲ ಮಿತಿಯೊಳಗೆ ಹುದ್ದೆಗಳನ್ನ ಭರ್ತಿ ಮಾಡಿ ಅಂತ ಆಗ್ರಹ ಮಾಡಿದರು.
ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿ, 2.84,881 ಹುದ್ದೆಗಳು ಖಾಲಿ ಇವೆ. 24,300 ಹುದ್ದೆ ತುಂಬಲು ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕಿದೆ. ಹೈದರಾಬಾದ್ ಕರ್ನಾಟಕ 371j ಹುದ್ದೆಗಳು 32,132 ಭರ್ತಿ ಮಾಡ್ತೀವಿ. ಒಟ್ಟಾಗಿ 56,432 ಹುದ್ದೆ ಭರ್ತಿ ಮಾಡ್ತಾ ಇದ್ದೇವೆ. ಒಳ ಮೀಸಲಾತಿ ಇದಿದ್ದಕ್ಕೆ ವಿಳಂಬ ಆಯ್ತು. ಈಗ ಒಳ ಮೀಸಲಾತಿ ಇತ್ಯರ್ಥ ಆಗಿದೆ. ಹುದ್ದೆ ಭರ್ತಿ ಮಾಡ್ತೀವಿ ಎಂದರು.
ಎಲ್ಲವೂ ಒಟ್ಟಿಗೆ ಮಾಡೋಕೆ ಆಗಲ್ಲ. ಹಂತ ಹಂತವಾಗಿ ಹುದ್ದೆ ಭರ್ತಿ ಮಾಡ್ತೀವಿ ಆರ್ಥಿಕ ಇಲಾಖೆ ಒಪ್ಪಿಗೆ ಕೊಡದೇ ಮಾಡೋಕೆ ಆಗೊಲ್ಲ. ಇಲ್ಲದೇ ಹೋದ್ರೆ ಸಂಬಳ ಕೊಡಲು ಸಾಧ್ಯವಿಲ್ಲ. ನಾನೇ ಫೈನಾನ್ಸ್ ಮಿನಿಸ್ಟರ್. ಹಂತ ಹಂತವಾಗಿ ಖಾಲಿ ಹುದ್ದೆ ತುಂಬಿತ್ತೇವೆ ಎಂದರು.
ಇದನ್ನೂ ಓದಿ : ವಿತ್ತ ಸಚಿವೆಯನ್ನು ಭೇಟಿಯಾದ ಸಂಸದ ಬಿ.ವೈ ರಾಘವೇಂದ್ರ | ಕೊಲ್ಲೂರು ಕಾರಿಡಾರ್ ಯೋಜನೆ ಕುರಿತು ಚರ್ಚೆ



















