ಚಿಕ್ಕಬಳ್ಳಾಪುರ :ಪ್ರೇಮಿಗಳಿಗೆ ಪೋಷಕರು ಮದುವೆ ಮಾಡಲು ಅಡ್ಡಿ ಮಾಡಿದ್ದಾರೆ ಈ ಹಿನ್ನಲೇ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪೊಲೀಸರೇ ವಿವಾಹ ನೆರವೇರಿಸಿದ್ದಾರೆ.
ನಗರದ ಸಿದ್ಧಾರ್ಥ ಬಡವಾಣೆಯ ನಿವಾಸಿಗಳಾದ ಗಣೇಶ್ (25) ಹಾಗೂ ಅಕ್ಷಯಾ (19) ಪ್ರೀತಿಸಿ ಮದುವೆಯಾದ ಜೋಡಿ. ಕಳೆದ ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.ಆದರೆ ಪೋಷಕರು ಇಷ್ಟವಿಲ್ಲದಿದ್ದರೂ ಸೋದರ ಮಾವನ ಜೊತೆ ಅಕ್ಷಯಾಳಿಗೆ ನಿಶ್ಚಿತಾರ್ಥ ಮಾಡಿದ್ದರು.
ಬಳಿಕ ತಾನು ಪ್ರೀತಿ ಮಾಡಿದ ಯುವಕನ ಜೊತೆ ಧರ್ಮಸ್ಥಳಕ್ಕೆ ಓಡಿ ಹೋಗಿ ವಿವಾಹವಾಗಿದ್ದಾರೆ. ಇತ್ತ ಮನೆಯವರು ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗೆ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ.
ಪೊಲೀಸರು ಪ್ರಕರಣದಂತೆ ಪ್ರೇಮಿಗಳನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪಿಎಸ್ಐ ವೇಣುಗೋಪಾಲ್ ನೇತೃತ್ವದಲ್ಲಿ ಪ್ರೇಮಿಗಳ ಒಪ್ಪಿಗೆಯಂತೆ ಠಾಣೆಯಲ್ಲೇ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆ | ಸಿಗದ ಸರಕಾರಿ ನೌಕರಿ.. ನಿರುದ್ಯೋಗಿ ಯುವಕ ಆತ್ಮಹತ್ಯೆ



















