ಗಿಲ್ಲಿ ಸದಾ ಕಾವು ಕಾವು ಅಂತಲೇ ಇರ್ತಾರೆ ಎನ್ನೋದು ಕೆಲವು ಸದಸ್ಯರ ಅಭಿಪ್ರಾಯ. ಕಾವ್ಯ ಅವರಿಗೂ ಇದು ಸಾಕಷ್ಟು ಬಾರಿ ಬೇಸರವೂ ಆಗಿದೆ. ಗಿಲ್ಲಿಯಿಂದ ಕಾವ್ಯ ಅನ್ನೋ ಮಾತು ಅವರಿಗೆ ಬೇಸರ ಉಂಟು ಮಾಡಿತ್ತು. ಅಷ್ಟೇ ಅಲ್ಲ ಈ ವಾರ ನಾಮಿನೇಶನ್ ಪ್ರಕ್ರಿಯೆಯಲ್ಲಿ ಈ ಬಗ್ಗೆಯೇ ಕಾರಣ ಕೊಟ್ಟಿದ್ದರು ಮನೆಮಂದಿ. ಈಗ ಸುದೀಪ್ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಮನೆಯಲ್ಲಿ ಕೆಲವರು ಜೋಡಿಯಾಗಿ ಆಡುತ್ತಿದ್ದಾರೆ. ಇದು ಸರಿಯಿಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಪ್ರಭಾವವನ್ನು ಬೀರುತ್ತಿದ್ದಾರೆ. ಹಾಗೆ ಮಾಡಿದವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಿದ್ದಾರೆ. ಜಾಹ್ನವಿ-ಅಶ್ವಿನಿ ಒಟ್ಟಾಗಿದ್ದರು. ಈಗ ಜಾಹ್ನವಿ ಹೋಗಿದ್ದಾರೆ. ಈ ಬಗ್ಗೆ ಮಾತನಾಡಿದ ಸುದೀಪ್. ‘ಅಂಚಲ್ಲಿ ಒಬ್ಬರೇ ಕೂತಿದ್ದಾರೆ ನೋಡಿ’ ಎಂದು ಅಶ್ವಿನಿ ಉದಾಹರಣೆ ಕೊಟ್ಟು ಹೇಳಿದರು.
ಗಿಲ್ಲಿ ಹಾಗೂ ಕಾವ್ಯಾ ಬಳಿನೂ ಸುದೀಪ್ ಚರ್ಚೆ ಮಾಡಿದ್ದಾರೆ. ನಿಮ್ಮಬ್ಬರ ಬಳಿ ಒಳ್ಳೆಯ ಫ್ರೆಂಡ್‌ಶಿಪ್ ಇರಬಹುದು. ಅವರ ಆಟ ಅವರಿಗೆ ಅವರಿಗೆ ಆಡುವುದಕ್ಕೆ ಬಿಡಿ. ನಿಮ್ಮ ಪ್ರಭಾವ ಅವರ ಮೇಲೆ ಬೀಳದೆ ಇರಲಿಲ್ಲ. ಅದರಿಂದಲೇ ಅವರು ಹೊರಗೆ ಹೋದರೆ, “ಕಾವು ಹೋಗಿ ಬಾ. ಹೊರಗೆ ಬಂದಮೇಲೆ ಸಿಕ್ತೀನಿ” ಎಂದು ಹೇಳುತ್ತೀರಾ ಎಂದು ಕೇಳಿದ್ದಾರೆ.
ಇದನ್ನೂ ಓದಿ : ವಿಜಯಪುರದಲ್ಲಿ ವೃಕ್ಷೋತಾನ್ ಮ್ಯಾರಥಾನ್‌ಗೆ ಚಾಲನೆ | ದೇಶದ ವಿವಿಧೆಡೆಯಿಂದ ಪಾಲ್ಗೊಂಡ ಕ್ರೀಡಾಪಟುಗಳು



















