ಚಿಕ್ಕಬಳ್ಳಾಪುರ : ಗಂಡ ಹೆಂಡತಿ ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಗುರಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಬೋರ್ ವೆಲ್ ನಾರಾಯಣಸ್ವಾಮಿ 67 ಸಾವನ್ನಪ್ಪಿರುವ ವ್ಯಕ್ತಿ. ಅಕ್ಕಪಕ್ಕದ ಮನೆಯವರಾದ ಮಧು ಮತ್ತು ಶೈಲ ದಂಪತಿಯ ಜಗಳ ಬಿಡಿಸಲೆಂದು ಮುಂದಾದ ನಾರಾಯಣಸ್ವಾಮಿ ನೂಕಾಟ ತಳ್ಳಾಟದ ನಡುವೆ ಆಯತಪ್ಪಿ ಮನೆಯ ಗೇಟ್‌ಗೆ ಬಂದು ಬಿದ್ದಿದ್ದು, ತಲೆಯ ಹಿಂಬದಿಗೆ ಗಾಢವಾದ ಪೆಟ್ಟು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸಪ್ತಪದಿ ತುಳಿದ ʼನೀನಾದೆ ನಾʼ ಧಾರವಾಹಿ ಖ್ಯಾತಿಯ ಅರುಣ್ ಕುಮಾರ್



















