ಬಿಗ್‌ಬಾಸ್ ಕನ್ನಡ ಸೀಸನ್ 12 ನಲ್ಲಿ ಸ್ಪರ್ಧಿಯಾಗಿ ಜನಮನ ಗೆದ್ದಿರುವ ಗಿಲ್ಲಿ ನಟ ಚಿಕ್ಕಪ್ಪನಾಗಿದ್ದಾರೆ. ಈ ಸಿಹಿ ಸುದ್ದಿಯನ್ನು ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಭಿಮಾನಿಗಳಿಗೆ ಹಂಚಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಫೋಟೊದಲ್ಲಿ, ಗಿಲ್ಲಿ ನಟನೊಂದಿಗೆ ಅವರ ಅಣ್ಣ ಮತ್ತು ಅತ್ತಿಗೆ ಕಾಣಿಸಿಕೊಂಡಿದ್ದು, ಪೋಸ್ಟ್‌ಗೆ ಸೇರಿಸಿದ ಬರಹ ಹೆಚ್ಚು ವೈರಲ್ ಆಗುತ್ತಿದೆ. “ಗಿಲ್ಲಿಗೆ ಗೊತ್ತಿರದ ವಿಷಯ ಒಂದಿದೆ. ಬಿಗ್‌ಬಾಸ್ ಮನೆಯೊಳಗೆ ಕುಳಿತು ಚಿಕ್ಕಪ್ಪನ ಕಥೆ ಹೇಳುವ ಗಿಲ್ಲಿ ಈಗ ನಿಜಕ್ಕೂ ಚಿಕ್ಕಪ್ಪ ಆಗಿದ್ದಾರೆ. ಗಿಲ್ಲಿಯ ಅಣ್ಣ ಮತ್ತು ಅತ್ತಿಗೆಯವರಿಗೆ ಇಂದು ವಿವಾಹ ವಾರ್ಷಿಕೋತ್ಸವವಾದರೆ, ಮುದ್ದು ಕೃಷ್ಣ ಹುಟ್ಟಿರುವುದು ಮತ್ತೊಂದು ಸಂಭ್ರಮ” ಎಂದು ಕುಟುಂಬದ ಸದಸ್ಯರು ಬರೆದಿದ್ದಾರೆ.
ಈ ಪೋಸ್ಟ್ ನೋಡುತ್ತಿದ್ದಂತೆಯೇ ಅಭಿಮಾನಿಗಳು ಕಾಮೆಂಟ್ಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ. “ಗಿಲ್ಲಿ ಅಣ್ಣನಿಗೆ ಅಭಿನಂದನೆಗಳು”, “ಮುದ್ದು ಮಗುವಿಗೆ ಆಶೀರ್ವಾದಗಳು”, “ನಾವು ಗಿಲ್ಲಿಯ ಜೊತೆ ಇದ್ದೇವೆ” ಎಂಬ ಸಂದೇಶಗಳಿಂದ ಕಮೆಂಟ್ ಬಾಕ್ಸ್ ತುಂಬಿದೆ.
ಇದನ್ನೂ ಓದಿ : ಚೈತ್ರಾ -ಗಿಲ್ಲಿ ನಡುವೆ ಕಿರಿಕ್ | ಈ ವಾರ ಮತ್ತೆ ಗಿಲ್ಲಿ ಕಳಪೆ ; ಪ್ರೋಮೊ ರೀಲಿಸ್



















