ಬೆಂಗಳೂರು: ವಿದ್ಯಾರ್ಥಿಗಳಿಗೆ ಈಗ ಅಧ್ಯಯನ ಮಾಡಲು ಲ್ಯಾಪ್ ಟಾಪ್ ಬೇಕು. ಇದನ್ನು ಮನಗಂಡಿರುವ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕ ಮತ್ತು ಮ್ಯೂನ್ಯುಯಲ್ ಸ್ಕ್ಯಾವೆಂಜರ್ ಆಗಿ ಕೆಲಸ ಮಾಡುತ್ತಿರುವವರ ಮಕ್ಕಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡುವ ಯೋಜನೆ ಘೋಷಣೆ ಮಾಡಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸುವ ಮೂಲಕ ಉಚಿತವಾಗಿ ಲ್ಯಾಪ್ ಟಾಪ್ ಪಡೆಯಬಹುದಾಗಿದೆ.
ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ನೀಡಲಾಗುತ್ತದೆ. ಅರ್ಜಿದಾರರ ಪಾಸ್ ಪೋರ್ಟ್ ಸೈಜಿನ ಫೋಟೊ, ಅರ್ಜಿದಾರರ ತಂದೆ ಅಥವಾ ತಾಯಿಯ ಸಫಾಯಿ ಕರ್ಮಚಾರಿ ಗುರುತಿನ ಚೀಟಿ, ಶೈಕ್ಷಣಿಕ ದಾಖಲೆ ಸೆರಿ ಹಲವು ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 08156-277026 ಸಂಖ್ಯೆಗೆ ಸಂಪರ್ಕಿಸಬಹುದು. ಅಥವಾ dmchikkaballapur8@yahoo.com ಗೆ ಮೇಲ್ ಮಾಡಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 6 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
• ಅರ್ಜಿ ಸಲ್ಲಿಸುವವರ ತಂದೆ ಅಥವಾ ತಾಯಿ ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕ ಅಥವಾ ಮ್ಯೂನ್ಯುಯಲ್ ಸ್ಕ್ಯಾವೆಂಜರ್ ಆಗಿರಬೇಕು.
• ಇವರು ಕನಿಷ್ಠ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿರಬೇಕು.
• ವಿದ್ಯಾರ್ಥಿಯು B.Com, B.Sc, BBM, MBBS, M.Com, MA, M.Sc, M.Tech, MBA ಸೇರಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ
ಜಿಲ್ಲಾ ವ್ಯವಸ್ಥಾಪಕರು
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ
ನಂ. SA1, ಜಿಲ್ಲಾಡಳಿತ ಭವನ
ಚಿಕ್ಕಬಳ್ಳಾಪುರ – 562101
ಇದನ್ನೂ ಓದಿ:ನಿಮ್ಮ ಕ್ರೆಡಿಟ್ ಸ್ಕೋರ್ 750ಕ್ಕಿಂತ ಜಾಸ್ತಿ ಇದ್ದರೆ ಏನೆಲ್ಲ ಉಪಯೋಗಗಳಿವೆ? ಇಲ್ಲಿದೆ ಮಾಹಿತಿ



















