ಬೆಂಗಳೂರು: ಗೃಹ ಸಾಲ, ವಾಹನ ಸಾಲ, ಪರ್ಸನಲ್ ಲೋನ್ ಸೇರಿ ಹಲವು ರೀತಿಯ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮುಖ್ಯವಾಗುತ್ತದೆ. ಕ್ರೆಡಿಟ್ ಸ್ಕೋರ್ ಹೆಚ್ಚಿದ್ದರೆ ಮಾತ್ರ ಕೆಲವು ಬ್ಯಾಂಕ್ ಗಳು ಸಾಲ ನೀಡುತ್ತವೆ. ಅದರಲ್ಲೂ, ಸಾರ್ವಜನಿಕರು, ಕ್ರೆಡಿಟ್ ಕಾರ್ಡ್ ಬಳಕೆದಾರರು ಕ್ರೆಡಿಟ್ ಸ್ಕೋರ್ ಅನ್ನು 750ಕ್ಕಿಂತ ಹೆಚ್ಚು ಮೆಂಟೇನ್ ಮಾಡಿದ್ದಾರೆ ಮಾತ್ರ ಹಲವು ಉಪಯೋಗಗಳು ದೊರೆಯುತ್ತವೆ. ಇಲ್ಲದಿದ್ದರೆ, ಹಲವು ರೀತಿಯಲ್ಲಿ ಸಮಸ್ಯೆಯಾಗುತ್ತದೆ.
ಕ್ರೆಡಿಟ್ ಸ್ಕೊರ್ ಹೆಚ್ಚಿರಬೇಕು ಏಕೆ?
- ಕ್ರೆಡಿಟ್ ಸ್ಕೋರ್ 750ಕ್ಕಿಂತ ಜಾಸ್ತಿ ಇದ್ದರೆ, ಆ ವ್ಯಕ್ತಿಯ ಹಣಕಾಸು ಶಿಸ್ತು ಚೆನ್ನಾಗಿದೆ ಅಂತ ಅರ್ಥ
- ಕ್ರೆಡಿಟ್ ಸ್ಕೋರ್ ಜಾಸ್ತಿ ಇದ್ದರೆ ಬ್ಯಾಂಕ್ ಗಳು ಸುಲಭವಾಗಿ ಸಾಲ ನೀಡುತ್ತವೆ.
- ಕ್ರೆಡಿಟ್ ಸ್ಕೋರ್ 750ಕ್ಕಿಂತ ಜಾಸ್ತಿ ಇದ್ದರೆ ಸಾಲ ಸಿಗುವ ಜತೆಗೆ, ಬಡ್ಡಿದರ ಕಡಿಮೆ ಇರುತ್ತದೆ
- ಕ್ರೆಡಿಟ್ ಸ್ಕೋರ್ 750ಕ್ಕಿಂತ ಕಡಿಮೆ ಇದ್ದರೆ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿ ವಿಧಿಸುತ್ತವೆ
- ಇನ್ನು 650ಕ್ಕಿಂತ ಕಡಿಮೆ ಇದ್ದರೆ ಬ್ಯಾಂಕುಗಳು ಸಾಲ ನೀಡುವುದಿಲ್ಲ
ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು?
- ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ತುಂಬಬೇಕು
- ಸಾಲ ಪಡೆದಿದ್ದರೆ, ಸಮಯಕ್ಕೆ ಇಎಂಐ ಕಟ್ಟಬೇಕು
- ಕ್ರೆಡಿಟ್ ಕಾರ್ಡ್ ಮಿತಿಯನ್ನು ಮೀರಿ ಖರ್ಚು ಮಾಡಬಾರದು
- ಕೇವಲ ಮಿನಿಮಮ್ ಡ್ಯೂ ಪಾವತಿಸಿದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಪೆಟ್ಟು ಬಿದ್ದಂತೆಯೇ ಲೆಕ್ಕ
ಇಷ್ಟೆಲ್ಲ ಕಾರಣಗಳಿಂದಾಗಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅನ್ನು ಪ್ರತಿಯೊಬ್ಬರೂ ಚೆನ್ನಾಗಿ ನಿರ್ವಹಿಸಬೇಕು. ಆಧುನಿಕ ಸಮಯದಲ್ಲಿ ಪ್ರತಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಒಬ್ಬ ವ್ಯಕ್ತಿಯ ಹಣಕಾಸು ಶಿಸ್ತು, ಆತನ ಮರುಪಾವತಿ ಸಾಮರ್ಥ್ಯವನ್ನು ಕ್ರೆಡಿಟ್ ಸ್ಕೋರ್ ನಿಂದಲೇ ಅಳೆಯುತ್ತವೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರಬೇಕು.
ಇದನ್ನೂ ಓದಿ:ತಿಂಗಳ ಮೊದಲ ದಿನವೇ ಗುಡ್ ನ್ಯೂಸ್, LPG ಸಿಲಿಂಡರ್ ಬೆಲೆಯಲ್ಲಿ 10 ರೂಪಾಯಿ ಇಳಿಕೆ



















