ಬೆಂಗಳೂರು: ಯುಪಿಐ ಸರ್ವರ್ ಡೌನ್ ಆದಾಗ, ತುರ್ತು ಸಂದರ್ಭಗಳಲ್ಲಿ ಬೇಕಾಗುತ್ತದೆ ಎಂದು ಎಟಿಎಂ ಮೂಲಕ ಹಣ ಡ್ರಾ ಮಾಡುತ್ತೇವೆ. ಆದರೆ, ಕೆಲವೊಮ್ಮೆ ಎಟಿಎಂ ಮಷೀನ್ ನಲ್ಲಿಯೇ ನಮ್ಮ ಡೆಬಿಟ್ ಕಾರ್ಡ್ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಆಗ ಗಾಬರಿಯಾಗದೆ ಒಂದಷ್ಟು ಪ್ರಕ್ರಿಯೆ ಅನುಸರಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಇಲ್ಲದಿದ್ದರೆ, ಇನ್ನೂ ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ.
ನೀವು ಹಣ ಡ್ರಾ ಮಾಡಲು ಹೋದಾಗ ಎಟಿಎಂನಲ್ಲಿಯೇ ಡೆಬಿಟ್ ಕಾರ್ಡ್ ಸಿಲುಕಿಹಾಕಿಕೊಂಡರೆ, ಅದನ್ನು ಅಲ್ಲಿಯೇ ಬಿಟ್ಟು ಬರಬಾರದು. ಇಲ್ಲವೇ, ಅದು ಮುರಿಯುವಂತೆ ಎಳೆಯಬಾರದು. ಇದರ ಬದಲಾಗಿ, ಕೂಡಲೇ ಎಟಿಎಂನಲ್ಲಿ ನಮೂದಿಸಿದರೆ ಕಸ್ಟಮರ್ ಕೇರ್ ಗೆ ಕರೆ ಮಾಡಬೇಕು. ಇಲ್ಲವೇ ಗೂಗಲ್ ನಲ್ಲಿ ಹುಡುಕಿ ಕಸ್ಟಮರ್ ಕೇರ್ ಗೆ ಕರೆ ಮಾಡಿ, ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡಿಸಬೇಕು.
ಬ್ಯಾಂಕ್ ಬಳಿಯೇ ಎಟಿಎಂ ಇದ್ದು, ಅಲ್ಲಿಯೇ ಸಿಬ್ಬಂದಿ ಇದ್ದರೆ ನಿಮ್ಮ ಎಟಿಎಂಅನ್ನು ಅವರೇ ಹೊರಗೆ ತೆಗೆದುಕೊಡುತ್ತಾರೆ. ಯಾರೂ ಇಲ್ಲದಿದ್ದರೆ, ಕಸ್ಟಮರ್ ಕೇರ್ ಗೆ ಕರೆ ಮಾಡಿ ಅದನ್ನು ಬ್ಲಾಕ್ ಮಾಡಿಸುವುದು ತುಂಬ ಸೇಫ್. ಹೀಗೆ ಬ್ಲಾಕ್ ಮಾಡಿಸಿದ ಕಾರ್ಡ್ ಅನ್ನು 7-10 ದಿನಗಳೊಳಗೆ ಬ್ಯಾಂಕ್ ನಿಮ್ಮ ವಿಳಾಸಕ್ಕೆ ಕಳುಹಿಸುತ್ತದೆ.
ಸರ್ವರ್ ಸಮಸ್ಯೆ, ವಿದ್ಯುತ್ ಪೂರೈಕೆ ಸಮಸ್ಯೆ ಹಾಗೂ ನಾವು ಅಗತ್ಯ ಮಾಹಿತಿಯನ್ನು ಒದಗಿಸಲು ವಿಳಂಬವಾದಾಗ ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಸ್ಟಕ್ ಆಗುತ್ತದೆ. ಹಾಗಾಗಿ, ಎಟಿಎಂ ಸಿಲುಕಿಕೊಂಡರೆ ಗಾಬರಿಯಾಗದೆ, ಸಹಾಯವಾಣಿಗೆ ಕರೆ ಮಾಡಬೇಕು. ಅದನ್ನು ಅಲ್ಲಿಯೇ ಬಿಟ್ಟು ಬಂದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿದ್ದ ಹಣವನ್ನು ವಂಚಿಸುವ ಸಾಧ್ಯತೆ ಹೆಚ್ಚಿರುತ್ತವೆ.
ಇದನ್ನೂ ಓದಿ : ಸಿಗರೇಟ್ ಕಿಡಿಯಿಂದ ಬೆಂಕಿ ಹೊತ್ತಿ ಸಿಲಿಂಡರ್ ಬ್ಲಾಸ್ಟ್ | ಏಳು ಗೂಡಂಗಡಿಗಳು ಭಸ್ಮ


















