ಬೆಂಗಳೂರು: ಹಾಡಹಗಲೇ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದು ಎಟಿಎಂಗೆ ಹಣ ತುಂಬಲು ಹೋಗುತ್ತಿದ್ದ ವಾಹನ ತಡೆದು ಬೆದರಿಸಿ 7.11 ಕೋಟಿ ದರೋಡೆಯ ಹಿಂದಿನ ಅಸಲಿ ಗುಟ್ಟು ಬಹಿರಂಗಗೊಂಡಿದೆ.
ದರೋಡೆಕೋರರನ್ನು ಬೆಂಗಳೂರು ಪೊಲೀಸರು ಬಂಧನ ಮಾಡಿದ್ದಾರೆ. ಸಿಎಂಎಸ್ ಸಂಸ್ಥೆ ಮಾಜಿ ನೌಕರ ಮಾಸ್ಟರ್‌ಮೈಂಡ್ ಜೇವಿಯರ್, ಗೋವಿಂದಪುರ ಪೊಲೀಸ್ ಠಾಣಾ ಕಾನ್‌ಸ್ಟೆಬಲ್ ಅಣ್ಣಪ್ಪನಾಯ್ಕ್, ಹಾಲಿ ಸಿಎಂಎಸ್ ಸಂಸ್ಥೆ ಸಿಬ್ಬಂದಿ ಗೋಪಿ, ರವಿ, ಜಿತೇಶ್ ಸೇರಿ ಒಟ್ಟು ಏಳು ದರೋಡೆಕೋರರನ್ನು ಬಂಧಿಸಲಾಗಿದ್ದು, ಬಂಧಿತ ದರೋಡೆಕೋರರಿಂದ 6.29 ಕೋಟಿ ಹಣ ರಿಕವರಿ ಮಾಡಲಾಗಿದೆ.
ದರೋಡೆಕೋರರ ದರೋಡೆ ಹಿಂದಿನ ಅಸಲಿ ಕಹನಿ ಬಯಲಾಗಿದ್ದು, ದರೋಡೆಯ ಮಾಸ್ಟರ್‌ಮೈಂಡ್ ಜೇವಿಯರ್ ಸೇರಿ ಗ್ಯಾಂಗ್‌ನಲ್ಲಿದ್ದ ಬಹುತೇಕರಿಗೆ ಮೈತುಂಬಾ ಸಾಲ ಇತ್ತು. ಇಸ್ಪೀಟು ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದರು. ಎಸಿಎಂ ಕಂಪನಿ ಕೊಡುವ 17,000 ರೂ. ಸಂಬಳದಲ್ಲಿ ಸಾಯುವತನಕ ಸಾಲ ತೀರಿಸುವುದಕ್ಕೆ ಆಗುವುದಿಲ್ಲ ಎಂದು ದೊಡ್ಡ ಮಟ್ಟದ ದರೋಡೆಗೆ ಕೈಹಾಕಲಾಗಿದೆ.
ದರೋಡೆ ಮಾಡಿ ಬಂದ ಹಣದಲ್ಲಿ ಮಾಡಿರುವಂತಹ ಸಾಲ ತೀರಿಸಿ ಮಿಕ್ಕ ಹಣದಲ್ಲಿ ವಿಲಾಸಿ ಜೀವನ ನಡೆಸಬಹುದೆಂದು ಆರೋಪಿಗಳು ದೊಡ್ಡ ದರೋಡೆಗೆ ಮಾಡಿದ್ದರೆಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಇದನ್ನೂ ಓದಿ: ISI ನಂಟು ಹೊಂದಿದ್ದ ಬೃಹತ್ ಶಸ್ತ್ರಾಸ್ತ್ರ ಜಾಲ ಭೇದಿಸಿದ ದೆಹಲಿ ಪೊಲೀಸರು | ನಾಲ್ವರ ಬಂಧನ



















