ನವದೆಹಲಿ : ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿರುವ ಅಂತಾರಾಷ್ಟ್ರೀಯ ಬೃಹತ್ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ದೆಹಲಿ ಅಪರಾಧ ವಿಭಾಗವು ಭೇದಿಸಿದ್ದು, ಈ ಗ್ಯಾಂಗ್‌ನ ನಾಲ್ವರನ್ನು ಬಂಧಿಸಲಾಗಿದೆ.
ಮಾಹಿತಿಗಳ ಪ್ರಕಾರ, ಟರ್ಕಿ ಮತ್ತು ಚೀನಾದಲ್ಲಿ ತಯಾರಾದ ಅತ್ಯಾಧುನಿಕ ಬಂದೂಕುಗಳನ್ನು ಈ ಗುಂಪು ಪೂರೈಸುತ್ತಿತ್ತು. ಅವುಗಳನ್ನು ಪಾಕಿಸ್ತಾನದ ಮೂಲಕ ಭಾರತಕ್ಕೆ ತರುತ್ತಿತ್ತು. ಶಸ್ತ್ರಾಸ್ತ್ರಗಳನ್ನು ಡ್ರೋನ್‌ಗಳ ಮೂಲಕ ಪಂಜಾಬ್‌ನಲ್ಲಿ ಬೀಳಿಸಲಾಗಿದೆ. ನಂತರ ಅವುಗಳನ್ನು ದೇಶದ ಒಳಗಡೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಪಂಜಾಬ್‌ನ ಇಬ್ಬರು ವ್ಯಕ್ತಿಗಳು ಸೇರಿದ್ದಾರೆ. ಬಂಧಿತರಿಂದ 10 ದುಬಾರಿ ವಿದೇಶಿ ಪಿಸ್ತೂಲ್‌ಗಳು ಮತ್ತು 92 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ದೆಹಲಿ ಮತ್ತು ನೆರೆಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪರಾಧಿಗಳು ಮತ್ತು ದರೋಡೆಕೋರರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಕಳ್ಳಸಾಗಣೆ ಗುಂಪು ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಇದೆ. ಐಎಸ್‌ಐ ನಿರ್ದೇಶನದಂತೆ ಈ ಗುಂಪಿನ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದರು. ಚೀನಾದ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಕ್ಕೆ ರವಾನಿಸಿ ನಂತರ ಅಲ್ಲಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ತನಿಖಾಧಿಕಾರಿಗಳು ಈಗ ಗ್ಯಾಂಗ್ ಪೂರೈಸಿದ ಶಸ್ತ್ರಾಸ್ತ್ರಗಳ ಸಂಖ್ಯೆ ಮತ್ತು ಖರೀದಿದಾರರ ಗುರುತುಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ಬೆಳವಣಿಗೆ ನಡೆಯುತ್ತೆ | ಹೆಚ್‌ಡಿಕೆ ಬಾಂಬ್



















