ಕಲಬುರ್ಗಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಗೆ ಹೆಂಡತಿಯ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು, 7 ವರ್ಷದ ಬಳಿಕ ಬೆಳಕಿಗೆ ಬಂದಿದೆ.
ಕಲಬುರಗಿ ತಾಲ್ಲೂಕಿನ ಕಣ್ಣಿ ಗ್ರಾಮದ ಬೀರಪ್ಪ ಕೊಲರಯಾದ ವ್ಯಕ್ತಿ. ಕೊಲೆಗೆ ಬೀರಪ್ಪನ ಹೆಂಡತಿ ಶಾಂತಾಬಾಯಿ ಬೇರೋಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಸಂಬಂಧ ಬೀರಪ್ಪ ಇಬ್ಬರಿಗೂ ಬುದ್ದಿ ಹೇಳಿದ್ದ, ಆದರೂ ಪತ್ನಿ ಆತನ ಮಾತೂ ಕೇಳದೆ ಇರುವುದರಿಂದ ಇದೇ ಕಾರಣಕ್ಕೆ ಬೀರಪ್ಪ ಕುಡಿತದ ಚಟಕ್ಕೆ ಒಳಗಾಗಿದ್ದ. 2016ರ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ಗ್ರಾಮದ ಸುಭಾಷ ಸಾಹುಕಾರ ಗೋಧಿಪಟ್ಟಿ ಹೊಲದಲ್ಲಿಈತನ ಶವ ಪತ್ತೆಯಾಗಿತ್ತು. ಈತನ ಮನೆಯವರು ಮತ್ತು ಸಂಬಂಧಿಕರು ಬೀರಪ್ಪ ಕುಡಿದ ನಶೆಯಲ್ಲಿ ಸತ್ತಿರಬಹುದು ಎಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು.
ಆದರೆ, ಕಳೆದ 5-6 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬೀರಪ್ಪನಿಗೆ ಸಂಬಂಧಿಸಿದ ವಿಡಿಯೋ ಹರಿದಾಡಿದ್ದು, ಆದರಲ್ಲಿ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ದುಡ್ಡು ಕೊಡದೆ ಇರುವುದಕ್ಕೆ ಕೊಲೆ ಆರೋಪಿ ಮಹೇಶ್ ಪೋನ್‌ನಲ್ಲಿ ಮಾತನಾಡುತ್ತಿರುವ ಆಡಿಯೋ ವೈರಲ್ ಆಗಿದೆ. ಕೊಲೆ ಆರೋಪಿ ಪೋನ್‌ನಲ್ಲಿ ಮಹಿಳೆ ಜೊತೆ ಮಾತಾಡಿರುವ ವಿಡಿಯೋ ವೈರಲ್ ಆದಾ ಬೆನ್ನಲ್ಲೆ ಬೀರಪ್ಪನ ಸಹೋದರ ಈ ಕೊಲೆ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದಾರೆ.
ಈ ದೂರಿನ ಅನ್ವಯ ಫರಹತಾಬಾದ್ ಪೊಲೀಸರು ಬೀರಪ್ಪನ ಹೆಂಡತಿ ಶಾಂತಾಬಾಯಿ, ಮಹೇಶ್, ಸುರೇಶ್, ಸಿದ್ದು, ಶಂಕರ್, ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ದರೋಡೆ ಪ್ರಕರಣ | ಸಿಎಂಎಸ್ ಕಂಪನಿಗೆ ಸೇರಿದ ಖಾಲಿ ಬಾಕ್ಸ್‌ಗಳು ಪತ್ತೆ ; ಆಂದ್ರ ಪೊಲೀಸರಿಂದ ಪರಿಶೀಲನೆ



















