ರಾಮನಗರ: ಬುದ್ದಿಮಾಂಧ್ಯ ಮಗಳ ಮೇಲೆ ತಂದೆಯೇ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ಅಕ್ಕೂರಿನಲ್ಲಿ ನಡೆದಿದೆ.
ಪಾಪಿ ತಂದೆ ತಿಮ್ಮರಾಜು ಎಂಬಾತನಿಂದ ಈ ಕೃತ್ಯ ನಡೆದಿದ್ದು, ಪತ್ನಿ ಕೂಲಿ ಕೆಲಸಕ್ಕೆಂದು ಹೋಗಿದ್ದ ವೇಳೆ ಕುಡಿದು ಬಂದು ಮನೆಯಲ್ಲಿದ್ದ ಪುತ್ರಿಯ ಮೇಲೆ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದ ತಿಮ್ಮರಾಜು, ಹದಿನೈದು ದಿನಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ನ. 17 ರಂದು ಈ ಘಟನೆ ನಡೆದಿದ್ದು, ಪತ್ನಯೇ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಈ ದೂರಿನ ಅನ್ವಯ ಅಕ್ಕೂರು ಠಾಣೆಯ ಪೊಲೀಸರು ಆರೋಪಿ ತಿಮ್ಮರಾಜುನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಪೋಷಕರ ಎದುರೇ ಮಗುವನ್ನು ಹೊತ್ತೊಯ್ದ ಚಿರತೆ | ಕಾಡಂಚಲ್ಲಿ ಮೃತದೇಹ ಪತ್ತೆ



















