ಕಲಬುರಗಿ : ಜೆಸ್ಕಾಂ ಲೈನ್ ಮ್ಯಾನ್ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಸವಪಟ್ಟಣ ಗ್ರಾಮದಲ್ಲಿ ನಡೆದಿದೆ. ಪರಮೇಶ್ವರ (50) ಆತ್ಮಹತ್ಯೆ ಮಾಡಿಕೊಂಡ ಲೈನ್ ಮ್ಯಾನ್.
ಬಸವಪಟ್ಟಣ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ಕಂಬಕ್ಕೆ ನೇಣುಬಿಗಿದುಕೊಂಡು ಪರಮೇಶ್ವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಫರಹತಾಬಾದ್ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕಲ್ಪತರು ನಾಡಿನಲ್ಲಿ ಸಾಮೂಹಿಕ ಸೀಮಂತ | ಗರ್ಭಿಣಿಯರಿಗೆ ಮಡಿಲು ತುಂಬಿದ ಹೆಬ್ಬಾಳ್ಕರ್



















