ನವದೆಹಲಿ : 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ನಿಮಿತ್ತ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೆ ಹೆಡ್ ಕೋಚ್ ಆಗಿ ಶ್ರೀಲಂಕಾ ದಿಗ್ಗಜ ಕುಮಾರ ಸಂಗಕ್ಕಾರ ನೇಮಕಗೊಂಡಿದ್ದಾರೆ.
ಆ ಮೂಲಕ ಈ ವರ್ಷದ ಆರಂಭದಲ್ಲಿ ಈ ಹುದ್ದೆಯನ್ನು ತೊರೆದಿದ್ದ ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ತುಂಬಿದ್ದಾರೆ. 2021ರಿಂದ 2024ರ ವರೆಗೆ ಆರ್‌ಆರ್ ತಂಡದಲ್ಲಿ ಕುಮಾರ ಸಂಗಕ್ಕಾರ ಹೆಡ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ತದನಂತರ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು.
ಸಂಗಕ್ಕಾರ ಮಾರ್ಗದರ್ಶನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, 2022ರಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಫೈನಲ್‌ಗೆ ಪ್ರವೇಶ ಮಾಡಿತ್ತು. ನಂತರ ಕಳೆದ ಸೀಸನ್‌ನಲ್ಲಿ ದ್ರಾವಿಡ್ ಕೋಚಿಂಗ್‌ಗೆ ಬಂದ ಬಳಿಕ ರಾಜಸ್ಥಾನ್ ತಂಡದ ಕ್ರಿಕೆಟ್ ಡೈರೆಕ್ಟರ್ ಆಗಿ ಸಂಗಕ್ಕಾರ ನೇಮಕಗೊಂಡಿದ್ದರು. ಇದೀಗ ಅವರು ಈ ಎರಡೂ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ.
ಇದನ್ನೂ ಓದಿ : ಸೌದಿಯಲ್ಲಿ ಭೀಕರ ಬಸ್ ದುರಂತಕ್ಕೆ 42 ಭಾರತೀಯರು ಸಾವು | ಪ್ರಧಾನಿ ಮೋದಿ ಸಂತಾಪ



















