ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆ 2025ರ ಮತ ಎಣಿಕೆ ಅಂತಿಮ ಘಟ್ಟದಲ್ಲಿದ್ದು, ಎನ್‌ಡಿಎ ಆರಂಭದಿಂದಲೇ ಮುನ್ನಡೆ ಕಾಯ್ದುಕೊಡು ಬರುತ್ತಿದೆ. ಈಗಾಗಲೇ ಮ್ಯಾಜಿಕ್ ನಂಬರ್ ದಾಟಿ ಎನ್‌ಡಿಎ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಎನ್‌ಡಿಎ ಯಾಕೆ ಗೆದ್ದಿದೆ ನೋಡಬೇಕಿದೆ ಎಂದಿದ್ದಾರೆ.
ಎನ್‌ಡಿಎ ಯಾಕೆ ಮುನ್ನಡೆ ಸಾಧಿಸಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಇನ್ನೂ ಪೂರ್ತಿ ಚಿತ್ರಣ ನನಗೆ ಸಿಕ್ಕಿಲ್ಲ. ಎನ್‌ಡಿಎ ಗೆದ್ದಿದೆಯಾ, ಕಾಂಗ್ರೆಸ್ ಸೋತಿದೆಯಾ ಎಂಬ ಚಿತ್ರಣ ಸಿಗಬೇಕಿದೆ. ಅಲ್ಲಿ ವೋಟ್ ಚೋರಿ ನಡೆದಿರುವ ಆರೋಪ ಇದೆ. ಫಲಿತಾಂಶ ಪೂರ್ತಿಯಾದ ಬಳಿಕ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
170ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ
243 ಸ್ಥಾನಗಳಲ್ಲಿ ಎನ್‌ಡಿಎ (ಬಿಜೆಪಿ + ಜೆಡಿ(ಯು)) 170ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಮಹಾಘಟಬಂಧನ್ (ಆರ್‌ಜೆಡಿ + ಕಾಂಗ್ರೆಸ್ + ಇತರರು) ಕೇವಲ 60ರ ಒಳಗೆ ಸೀಮಿತವಾಗಿದೆ. ಕಾಂಗ್ರೆಸ್‌ಗೆ ಇದು ದೊಡ್ಡ ಆಘಾತವಾಗಿದೆ.
ಇದನ್ನೂ ಓದಿ : ಸೈಡ್ ಕೊಡದಿದ್ದಕ್ಕೆ ಕಿರಿಕ್ | ಕಾರಿನಿಂದ ಗುದ್ದಿಸಿ ಬೈಕ್‌ನಲ್ಲಿದ್ದ ಮೂವರ ಕೊಲೆಗೆ ಯತ್ನಿಸಿದ ಟೆಕ್ಕಿ ಅರೆಸ್ಟ್!



















