ರಾಮನಗರ: ಪೌತಿ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟದ್ದ ಮೂವರು ಆರೋಪಿಗಳು ಲೋಕಾಯುಕ್ತ ಬಲೆಗೆ ಬಿದ್ದಿರು ಘಟನೆ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಕಂದಾಯ ನಿರೀಕ್ಷಕ ಕಚೇರಿಯಲ್ಲಿ ನಡೆದಿದೆ.
ಕಂದಾಯ ನಿರೀಕ್ಷಕ ತಂಗವೇಲು, ವಿಎ ಚಂದ್ರೇಗೌಡ, ಡಾಟಾ ಎಂಟ್ರಿ ಅಪರೇಟರ್ ಉಮೇಶ್ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳು.
ಕನಕಪುರ ತಾಲೂಕಿನ ಹಳ್ಳಿಗುಡ್ಡೆ ತಾಂಡ್ಯದ ನಿವಾಸಿ ಬಲರಾಮ್ ಎಂಬುವವರ ಬಳಿ ಪೌತಿ ಖಾತೆ ಮಾಡಿಕೊಡುವುದಾಗಿ ಎರಡು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರು ದಕ್ಷಿಣ ಲೋಕಾಯುಕ್ತ ಎಸ್ ಪಿ ಸ್ನೇಹ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ; ಬೈಕ್, ಕಾರಿನ ನಡುವೆ ಭೀಕರ ಅಪಘಾತ | ಪಾದಚಾರಿ ಸೇರಿ ಮೂವರು ಸ್ಥಳದಲ್ಲೇ ಸಾವು



















