ಬೆಂಗಳೂರು : ಬೆಂಗಳೂರಿನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಟಿಂಬರ್ ಲೇಔಟ್ ಗೋಡೌನ್‌ನಲ್ಲಿ ಅವಘಡ ಸಂಭವಿಸಿದೆ.
ಬೆಳಗ್ಗಿನ ಜಾವ 6 ಗಂಟೆಯ ಸುಮಾರಿಗೆ ಸ್ಯಾಟಲೈಟ್ ಬಸ್ಟಾಂಡ್ ಬಳಿಯಿರುವ ಟಿಂಬರ್ ಲೇಔಟ್‌ನ ಮರದ ತುಂಡುಗಳನ್ನು ಇಟ್ಟಿದ್ದ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದವರು ಅದೃಷ್ಟಾವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ತಕ್ಷಣ ಆಗಮಿಸಿದ್ದು, ಪ್ರಕರಣ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಮೊಬೈಲ್ ಬಳಕೆದಾರರೇ ಗಮನಿಸಿ : ಈ ದಿನಾಂಕದಿಂದ ಏರಿಕೆಯಾಗಲಿದೆ ರಿಚಾರ್ಜ್ ದರ



















