ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಟ್ರೀಟ್ಮೆಂಟ್ ನೀಡಿರುವ ವಿಚಾರದಲ್ಲಿ ಓರ್ವ ಅಧಿಕಾರಿಯ ವರ್ಗಾವಣೆ, ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣ ಸಂಬಂಧ ಗೃಹಸಚಿವ ಪರಮೇಶ್ವರ್ ಅವರು, ಸರ್ಕಾರ ತೆಗೆದುಕೊಂಡಿರುವ ಮಹತ್ವದ ವಿಚಾರವನ್ನು ತಿಳಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಮುಖ್ಯ ಅಧೀಕ್ಷಕ ಸುರೇಶ್‌ರ ವರ್ಗಾವಣೆ, ಜೈಲ್ ಅಧೀಕ್ಷಕ ಮ್ಯಾಗೇರಿ ಮತ್ತು ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಈ ರೀತಿ ಪ್ರಕರಣ ಮರುಕಳಿಸದೇ ಇರಲು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರ ಮುಖ್ಯಸ್ಥರಾಗಿರುವ ಸಮಿತಿಯನ್ನು ಕೂಡ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು, ಎಸ್‌ಪಿ ಇರಲಿದ್ದಾರೆ.
ಗೃಹ ಸಚಿವರು ಹೇಳಿದ್ದೇನು?
- ವೈರಲ್ ಆಗಿರುವ ವಿಡಿಯೋಗಳು ಹಳೆಯದು, 2023ರಲ್ಲಿ ಅವುಗಳನ್ನ ಚಿತ್ರೀಕರಿಸಲಾಗಿದೆ
- ಜೈಲಿನ ಈ ಚಟುವಟಿಕೆ, ವಿದ್ಯಮಾನಗಳ ಬಗ್ಗೆ ತನಿಖೆ ನಡೆಸಲು ಹೈ-ಪವರ್ ಕಮಿಟಿ ರಚನೆ
- ಎಲ್ಲಾ ಕಾರಾಗೃಹಗಳ ಪರಿಶೀಲನೆ ಮಾಡಿ ಸಮಗ್ರ ವರದಿ ನೀಡುವಂತೆ ಕಮಿಟಿಗೆ ತಿಳಿಸಲಾಗಿದೆ
- ಹೀತೇಂದ್ರ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗಿದೆ, ಅಮರನಾಥ್ ಕಮಿಟಿ ಸದಸ್ಯರು
- ಸಂದೀಪ್ ಪಾಟೀಲ್, ರಿಶಾಂತ್, ಅಮರನಾಥ ರೆಡ್ಡಿ ಕೂಡ ಕಮಿಟಿಯಲ್ಲಿ ಇರಲಿದ್ದಾರೆ
- ಪ್ರಕರಣದಲ್ಲಿ ಚೀಫ್ ಸೂಪರಿಡೆಂಟ್ ಕೆ.ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ
- ಪರಪ್ಪನ ಅಗ್ರಹಾರ ಜೈಲಿನ ನಿರ್ವಹಣೆಗೆ, ಐಪಿಎಸ್ ಅಧಿಕಾರಿ ನೇಮಕ ಮಾಡಲಾಗಿದೆ
- ಅಧಿಕಾರಿಗಳಾದ ಮ್ಯಾಗೇರಿ, ಅಶೋಕ್ ಬಜಂತ್ರಿ ಅವರುಗಳನ್ನು ಅಮಾನತು ಮಾಡಲಾಗಿದೆ
- ವರದಿ ಬಂದ ನಂತರ ಮತ್ತಷ್ಟು ಕ್ರಮ, ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚನೆ
ಇದನ್ನೂ ಓದಿ : ಬೀದರ್ | ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ಕುಂದುಕೊರತೆ ಆಲಿಸಿದ ನಾಗಲಕ್ಷ್ಮೀ ಚೌಧರಿ



















