ತುಮಕೂರು: ಬೈಕ್ ಡಿಕ್ಕಿಯಾಗಿ ರಸ್ತೆಯ ಮೇಲೆ ಬಿದ್ದ ವೃದ್ಧೆಯ ಮೇಲೆ ಹಿಂಬದಿಯಿಂದ ಬಂದ ಕಾರು ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೊತ್ತಗೆರೆ ಬಳಿ ನಡೆದಿದೆ.
ಕೊತ್ತಗೆರೆ ಗ್ರಾಮದ ಗಂಗಮ್ಮ (49) ಮೃತ ಮಹಿಳೆ. ಗಂಗಮ್ಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ಗುದ್ದಿದ ಪರಿಣಾಮ ಗಂಗಮ್ಮ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಕಾರು ಗಂಗಮ್ಮ ಮೇಲೆ ಹರಿದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಘಟನಾ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಾರೋಬೆಲೆ ಡ್ಯಾಮ್ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆ ಸಾವು



















