ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಅನ್ನೋದು ಹಾಸು ಹೊದ್ದಾಗಿದೆ. ಅಬಕಾರಿ, ಸಾರಿಗೆ ಇಲಾಖೆ, ಪೊಲೀಸ್ ಸೇರಿ ಹಲವು ಇಲಾಖೆಗಳಲ್ಲಿ ಲಂಚಾವತಾರ ಖುಲ್ಲಾಂಖುಲ್ಲಾ ನಡೆಯುತ್ತಿದೆ. ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ಹಾಗೂ ಲೋಕಾಯುಕ್ತದ ಭಯವೇ ಇಲ್ಲ.

ಇದೀಗ ಬೆಂಗಳೂರಿನ ಆರು RTO ಕಚೇರಿಗಳಲ್ಲಿ ಭಾರೀ ಭ್ರಷ್ಟಚಾರ ಆರೋಪ ಕೇಳಿಬಂದಿದೆ. ಹೌದು.. ಭ್ರಷ್ಟಚಾರ ಆರೋಪ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ನಗರದ 6 RTO ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಕೆಆರ್ ಪುರಂ, ಯಲಹಂಕ, ಜಯನಗರ, ರಾಜಾಜಿನಗರ, ಕಸ್ತೂರಿ ನಗರ ಸೇರಿದಂತೆ ಹಲವೆಡೆ ಆರ್‌ಟಿಓ ಕಚೇರಿಗಳ ಮೇಲೆ ರೇಡ್ ಮಾಡಿ ಪರಿಶೀಲನೆ ನಡೆಸಲಾಗಿದೆ. ಏಕಕಾಲಕ್ಕೆ ಹಲವು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿರುವ ಲೋಕಾ ಟೀಂ, ದಾಖಲೆಗಳ ಪರಿಶೀಲನೆ ಮಾಡ್ತಿದ್ದಾರೆ. ಇನ್ನು ಯಶವಂತಪುರ ಆರ್‌ಟಿಓ ಕಚೇರಿ ಮೇಲೆ ಖುದ್ದು ಲೋಕಾಯುಕ್ತ ನ್ಯಾ. ಬಿಎಸ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ : ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ | ನಾವು ರೈತರ ಪರ ಎಂದ ಸಿಎಂ ಸಿದ್ದರಾಮಯ್ಯ



















