ಸ್ಯಾಂಡಲ್‌ವುಡ್ ಕ್ಯೂಟ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಇತ್ತೀಚೆಗೆ ತಮ್ಮ ಮಗ ಯಥರ್ವ್‌ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 2019ರ ಅಕ್ಟೋಬರ್ 30ರಂದು ಯಶ್- ರಾಧಿಕಾ ಪಂಡಿತ್‌ಗೆ ಯಥರ್ವ್ ಜನಿಸಿದ್ದ. ಹೀಗಾಗಿ ಈ ಬಾರಿ ಅತನ 6ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಯಥರ್ವ್‌ನ ಇಚ್ಛೆಯಂತೆ ಕಾಡಿನ ಥೀಮ್‌ನಲ್ಲಿ ಇಡೀ ಸಮಾರಂಭ ನಡೆದಿದೆ. ಸದ್ಯ ರಾಧಿಕಾ ಪಂಡಿತ್ ಮಗನ ಹುಟ್ಟುಹಬ್ಬ ಆಚರಣೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ʼʼಪ್ರಕೃತಿ ಪ್ರೇಮಿ ಯಥರ್ವ್‌ಗೆ ಅದ್ಭುತವಾದ 6ನೇ ಹುಟ್ಟುಹಬ್ಬ! ಆ ದಿನವನ್ನು ಸಹಬಾಳ್ವೆಯ ಉದಾಹರಣೆಯಾಗಿ ಆಚರಿಸಲಾಯಿತು. ರಕ್ಷಿಸಲ್ಪಟ್ಟ ಪ್ರಾಣಿಗಳನ್ನು ಇಲ್ಲಿಗೆ ಕರೆತಂದಿದ್ದಕ್ಕಾಗಿ ʼಪ್ರಾಣಿ ದಿ ಪೆಟ್ ಸ್ಯಾಂಕ್ಚುರಿʼ ಸಂಸ್ಥೆಗೆ ವಿಶೇಷ ಧನ್ಯವಾದಗಳುʼʼ ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ನಿಜವಾದ ಪ್ರಾಣಿ ಪಕ್ಷಿಗಳ ಜತೆ ಯಥರ್ವ್ ಹುಟ್ಟುಹಬ್ಬ ಆಚರಿಸಿದ್ದು ವಿಶೇಷ. ಹಾವು, ಆಮೆ, ಓತಿ, ಕಪ್ಪೆ, ಗಿಳಿ ಮುಂತಾದ ವನ್ಯ ಜೀವಿಗಳನ್ನು ಈ ಪಾರ್ಟಿಗೆ ಕರೆತರಲಾಗಿತ್ತು. ಯಥರ್ವ್ ಸೇರಿದಂತೆ ಮಕ್ಕಳೆಲ್ಲ ಈ ಪ್ರಾಣಿಗಳನ್ನು ಸ್ಪರ್ಶಿಸಿ ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ : ಲಾಲ್ಬಾಗ್ ಹಾಳು ಮಾಡಲು ನಾನು ಮೂರ್ಖನಲ್ಲ | BJP ವಿರುದ್ಧ ವಾಗ್ದಾಳಿ ನಡೆಸಿದ ಡಿಸಿಎಂ


















