ಬೆಂಗಳೂರು : ರೆಡ್ ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಆಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ಘಟನೆ ರಿಚ್ಮಂಡ್ ಸರ್ಕಲ್‌ನಲ್ಲಿ ನಡೆದಿದೆ.
ವೇಗವಾಗಿ ಬಂದ ಆಂಬುಲೆನ್ಸ್ ಏಕಾಏಕಿ ಬಂದು ಮೂರು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸಮೇತ 50 ಮೀಟರ್ ಎಳೆದೊಯ್ದಿದಿದೆ. ಬಳಿಕ ಪೊಲೀಸ್ ಚೌಕಿಗೆ ಗುದ್ದಿ ನಿಂತಿದೆ.
ಅಲ್ಲಿದ್ದ ಸ್ಥಳಿಯರು ಆಕ್ರೋಶಗೊಂಡು ಅಂಬುಲೆನ್ಸ್‌ನ್ನು ಪಲ್ಟಿ ಮಾಡಿದ್ದಾರೆ. ಈ ಏರಿಯಾದಲ್ಲಿ ಅಂಬುಲೆನ್ಸ್ ಅಪಘಾತ ಎರಡನೆ ಸಾರಿ ಆಗಿರೋದು. ಯಾರು ಇಲ್ಲದಿದ್ರು ಸೈರನ್ ಹಾಕಿಕೊಂಡು ಬರ್ತಾರೆ. ಇವ್ರಿಂದ ಇವತ್ತು ಇಬ್ಬರ ಪ್ರಾಣ ಹೋಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ಯುವತಿ ಅನುಮಾನಾಸ್ಪದ ಸಾವು ; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ



















