ಶಿವಮೊಗ್ಗ: ಆರ್ ಎಸ್ ಎಸ್ ಸ್ಥಾಪನೆಯ 100ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಶಿಕಾರಿಪುರದಲ್ಲಿ ಆರಂಭಗೊಂಡ ಸಂಚಲನದಲ್ಲಿ ಶಿಕಾರಿಪುರ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಗೂರುಮೂರ್ತಿ ಭಾಗಿಯಾಗಿದ್ದರು.
ಶಿಕಾರಿಪುರದ ವಾಲ್ಮೀಕಿ ಭವನದಿಂದ ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಹಾದು ಹೋಗಿ, ಸೊರಬ ರಸ್ತೆವರೆಗೆ ನಡೆಯಲಿರುವ ಪಥಸಂಚಲನದಲ್ಲಿ ಶಿಕಾರಿಪುರದ ವಿವಿಧ ಶಾಖೆಗಳಿಂದ 1000ಕ್ಕೂ ಹೆಚ್ಚು ಸ್ವಯಂಸೇವಕರು ಗಣ ವೇಷಧಾರಿಗಳಾಗಿ ಪಾಲ್ಗೊಂಡಿದ್ದರು.
ಪಥ ಸಂಚಲನ ಸಾಗುವ ಮಾರ್ಗದಿದ್ದಕ್ಕೂ ಬಣ್ಣ ಬಣ್ಣದ ರಂಗೋಲಿಗಳಿಂದ ಅಲಂಕರಿಸಲಾಗಿತ್ತು ಹಾಗೂ ಮಾರ್ಗ ಮಧ್ಯದಲ್ಲಿನ ಪ್ರಮುಖ ವೃತಗಳಲ್ಲಿ ಭಾರತ ಮಾತೆಗೆ ಪುಷ್ಪ ನಮನ ನಡೆಸಲಾಯಿತು.
ನಗರದಲ್ಲಿ ಪಥ ಸಂಚನದ ಹಿನ್ನೆಲೆಯಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಸಂಭ್ರಮ | ನಾಗೂರಿನಲ್ಲಿ ಅದ್ದೂರಿಯಾಗಿ ಜರುಗಿದ ‘ಕನ್ನಡ ಹಬ್ಬ’



















